ಅನಧಿಕೃತ ಪೆಟ್ರೋಲ್​ ಬಂಕ್​ ತೆರವುಗೊಳಿಸಿದ ನಗರಸಭೆ

ಕೋಲಾರ: ನಗರದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳು ಘರ್ಜಿಸಿವೆ. ಕೋಲಾರ ನಗರದ ಹಳೇ ಬಸ್ ನಿಲ್ದಾಣದ ಬಳಿ ಅನಧಿಕೃತವಾಗಿದ್ದ ಪೆಟ್ರೋಲ್ ಬಂಕ್​​​ಗಳ ತೆರವು ಕಾರ್ಯಚರಣೆ ನಡೆಸಲಾಗಿದೆ.

ಗುತ್ತಿಗೆ ಅವಧಿ ಮುಗಿದರೂ ನಗರಸಭೆಗೆ ಜಾಗ ಬಿಟ್ಟುಕೊಡದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಪೆಟ್ರೋಲ್​ ಬಂಕ​ನ್ನು ನಗರ ಸಭೆ ಅಧಿಕಾರಿಗಳು ಜೆಸಿಬಿಯಿಂದ ಇಂದು ಮುಂಜಾನೆ ತೆರುವುಗೊಳಿಸಿದ್ದಾರೆ. ನಗರಸಭೆ ಪೆಟ್ರೋಲ್​ ಬಂಕ್​ಗೆ ಗುತ್ತಿಗೆ ಆಧಾರದಲ್ಲಿ ನೀಡಿದ ಅವಧಿ ಮುಗಿದ ನಂತರ ಜಾಗ ಬಿಟ್ಟು ಕೊಡಿ ಎಂದು ನೋಟಿಸ್​ ನೀಡಿತ್ತು. ಆದ್ರೆ  ನೋಟೀಸ್ ಧಿಕ್ಕರಿಸಿದ್ದ‌ ಹಿನ್ನೆಲೆಯಲ್ಲಿ ‌ನಗರಸಭೆ ಆಯುಕ್ತ ಆರ್​. ಶ್ರೀಕಾಂತ್ ನೇತೃತ್ವದಲ್ಲಿ ಪೆಟ್ರೋಲ್​ ಬಂಕ್​ ತೆರವುಗೊಳಿಸಲಾಗಿದೆ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv