ಅಕ್ರಮ ಗಣಿಗಾರಿಕೆ ಪ್ರಕರಣ.. ಗಾಲಿ ಜನಾರ್ದನ ರೆಡ್ಡಿ ಆಸೆ ನೆರವೇರುತ್ತಾ..!

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಳ್ಳಾರಿಯ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಶಾಸಕ ಆನಂದ್ ಸಿಂಗ್ ಸೇರಿ ಹಲವು ಆರೋಪಿಗಳ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ರು.
ಬಿ.ವಿ.ಪಾಟೀಲ ನೇತೃತ್ವದ ಪೀಠ ಅರ್ಜಿ ವಿಚಾರಣೆ ನಡೆಸಿದೆ. ಆಕ್ಷೇಪಣೆ ಸಲ್ಲಿಸಲು ವಿಶೇಷ ಅಭಿಯೋಜಕರಿಗೆ ಸೂಚನೆ ನೀಡಲಾಗಿದೆ. ಅರ್ಜಿ ವಿಚಾರಣೆಯನ್ನ ಕೋರ್ಟ್ ಜುಲೈ 11 ಕ್ಕೆ ಮುಂದೂಡಿದೆ. ಎಲ್ಲಾ ಆರೋಪಿಗಳ ಖುದ್ದು ಹಾಜರಾಗುವಂತೆ ಕೋರ್ಟ್ ಸೂಚಿಸಿದ ಹಿನ್ನೆಲೆ ಸಿಟಿ ಸಿವಿಲ್ ಕೋರ್ಟ್‌ನ ಚುನಾಯಿತ ಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಆರೋಪಿಗಳು ಹಾಜರಾಗಿದ್ರು.

ಕಳಂಕದಿಂದ ಮುಕ್ತವಾಗಲು ರೆಡ್ಡಿ ಅರ್ಜಿ..!
ತಮ್ಮನ್ನು ಪ್ರಕರಣದಿಂದ ಕೈಬಿಡುವಂತೆ ಆರೋಪಿಗಳಾದ ಜನಾರ್ದನ ರೆಡ್ಡಿ , ಆಲಿಖಾನ್, ಸುರೇಶ್ ಬಾಬು, ಬಿ.ಎಲ್.ರಾಣಿ ಸಂಯುಕ್ತ ಮೊದಲಾದವರು ಚುನಾಯಿತ ಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಕ್ರಮ ಗಣಿಗಾರಿಕೆ ಪ್ರಕರಣವನ್ನ ಸಿಬಿಐ ನಡೆಸುತ್ತಿದೆ. ಸತೀಶ್ ಕೃಷ್ಣ ಸೈಲ್, ನಾಗೇಂದ್ರ , ಸುರೇಶ್ ಬಾಬು ಜನಾರ್ದನ ರೆಡ್ಡಿ ಸೇರಿದಂತೆ 54 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಬಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv