ಜಾನುವಾರು ಅಕ್ರಮ ಸಾಗಣೆ, 2 ಬಂಧನ, 6 ಜಾನುವಾರು ರಕ್ಷಣೆ

ಶಿರಸಿ : ಅಕ್ರಮವಾಗಿ ಜಾನುವಾರು ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಧಾರವಾಡ ಜಿಲ್ಲೆಯ ಮಾಚಾಪುರ ನಿವಾಸಿ ಕಲ್ಲಪ್ಪ ಮಾದೇವಪ್ಪ ರಾಮನಕೊಪ್ಪ ಹಾಗೂ ಯುಸೂಬ್ ಅಲ್ಲಾವುದ್ದೀನ್ ಖಾನ್ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ಆರು ಜಾನುವಾರುಗಳನ್ನು ರಕ್ಷಿಸಲಾಗಿದೆ. ಬಂಧಿತರು ಅಂಕೋಲಾದಿಂದ ಹುಬ್ಬಳ್ಳಿ ಕಡೆಗೆ ಹಸುಗಳನ್ನು ಸಾಗಾಟ ಮಾಡುತ್ತಿದ್ದರು. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv