ದರ್ಶನ್ ಫಾರಂ ಹೌಸ್​ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ: ತಹಶೀಲ್ದಾರ್ ನಾಗೇಶ್

ಮೈಸೂರು:  ದರ್ಶನ್ ಫಾರಂ ಹೌಸ್​ನಲ್ಲಿ ಅಕ್ರಮವಾಗಿ ಹಣ ವಹಿವಾಟು, ಇತರೆ ಚಟುವಟಿಕೆಗಳು ನಡೆಯುತ್ತಿವೆ ಅಂತಾ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ದರ್ಶನ್ ಫಾರಂ ಹೌಸ್ ಮೇಲೆ ತಹಶೀಲ್ದಾರ್ ಆದೇಶದ ಮೇರೆಗೆ ಫ್ಲೈಯಿಂಗ್ ಸ್ಕ್ವಾಡ್ ಪರಿಶೀಲನೆ ನಡೆಸಿತ್ತು. ಆದ್ರೆ  ಫಾರಂ ಹೌಸ್​ನಲ್ಲಿ ಯಾವುದೇ ಅಕ್ರಮ ನಡೆದಿರುವ ಕುರುಹು ಸಿಕ್ಕಿಲ್ಲ. ಪರಿಶೀಲನೆ ನಡೆಸಿದ ದೃಶ್ಯಗಳನ್ನು ಅಧಿಕಾರಿಗಳು ಸೆರೆ ಹಿಡಿದುಕೊಂಡು ಬಂದಿದ್ದಾರೆ ಎಂದು ಫಸ್ಟ್ ನ್ಯೂಸ್​ಗೆ ತಿ.ನರಸೀಪುರ ತಹಶೀಲ್ದಾರ್ ನಾಗೇಶ್ ಮಾಹಿತಿ ನೀಡಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv