ಇಫ್ತಾರ್​ ಕೂಟದ ಬಗ್ಗೆ ಪೇಜಾವರ ಶ್ರೀಗಳು ಹೀಗೆ ಹೇಳಿದ್ರು

ತುಮಕೂರು: ಕಳೆದ ವರ್ಷ ಉಡುಪಿಯ ಮಠದಲ್ಲಿ ಇಫ್ತಾರ್​ ಕೂಟ ಆಯೋಜಿಸಿದ್ದ ಪೇಜಾವರ ಶ್ರೀಗಳು ಈ ಸಲ ಅದರ ಬಗ್ಗೆ ಆಸಕ್ತಿವಹಿಸಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಮುಸ್ಲಿಮ್​ ಸಮುದಾಯದವರೇ ಆಸಕ್ತಿವಹಿಸಿರಲಿಲ್ಲ. ಮೇಲಾಗಿ ನಾನು ಉತ್ತರ ಭಾರತದ ಪ್ರವಾಸದಲ್ಲಿದ್ದರಿಂದ ಇಪ್ತಾರ್​ ಕೂಟ ಆಯೋಜಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಕಳೆದ ಸಲದ ಇಫ್ತಾರನಲ್ಲಿ ದೇವರ ಮೂರ್ತಿ ಇರಲಿಲ್ಲ
ಇನ್ನು ಕಳೆದ ಬಾರಿ ಇಫ್ತಾರ್​​ ಕೂಟದ ಕೊಠಡಿಯಲ್ಲಿ ದೇವರ ಮೂರ್ತಿ ಇತ್ತು ಅಂತಾ ಕೆಲವು ಮುಸ್ಲಿಮ್​ ಮುಖಂಡರು ಆರೋಪ ಮಾಡಿದ್ದರು. ಆ ಕಾರಣಕ್ಕೆ ಇಫ್ತಾರ್​ ಕೂಟಕ್ಕೆ ಅಷ್ಟೊಂದು ಆಸಕ್ತಿ ಅವರು ತೋರಿಸಲಿಲ್ಲ ಎನ್ನಲಾಗಿದೆ. ಆದ್ರೆ ಅವರು ಹೇಳುವಂತೆ ಅಲ್ಲಿ ಯಾವುದೇ ಮೂರ್ತಿ ಇರಲಿಲ್ಲ. ಪಕ್ಕದ ಕೊಠಡಿಯಲ್ಲಿ ಇತ್ತು ಅಂತಾ ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv