ಜಮೀನಿನ ಬೇಲಿಯಲ್ಲಿ ಎಸೆದಿದ್ದ ಮೂಟೆ ಬಿಚ್ಚಿದಾಗ ಕಂಡಿದ್ದೇನು..?

ರಾಮನಗರ: ಕಳ್ಳತನ ಮಾಡಿಕೊಂಡು ಬಂದಿದ್ದ ಪಂಚಲೋಹದ ದೇವರ ವಿಗ್ರಹಗಳನ್ನ ಕಳ್ಳರು ರೈತನ ಜಮೀನಿನ ಬೇಲಿಯಲ್ಲಿ ಎಸೆದು ಹೋಗಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಭೂವಳ್ಳಿ ಗ್ರಾಮದ ರೈತ ಉಮೇಶ್ ಎಂಬುವವರ ಜಮೀನಿನಲ್ಲಿ ಎಸೆದು ಹೋಗಿರುವ ವಿಗ್ರಹಗಳ ಮೂಟೆ ಸಿಕ್ಕಿದೆ.
ಭೂವಳ್ಳಿ ಗ್ರಾಮದ ರೈತ ಉಮೇಶ್ ಎಂಬುವವರ ಜಮೀನಿನಲ್ಲಿ ಪಂಚಲೋಹದ ದೇವರ ಮೂರ್ತಿಗಳು ತುಂಬಿದ್ದ ಮೂಟೆ ಸಿಕ್ಕಿದ್ದು, ಬೇರೆಡೆ ಕಳ್ಳತನ ಮಾಡಿ ಇಲ್ಲಿ ತಂದು ಎಸೆದು ಹೋಗಿರಬಹುದು ಎಂದು ಶಂಕಿಸಲಾಗಿದೆ. ಭಾನುವಾರ ಬೆಳಗ್ಗೆ ಜಮೀನು ಮಾಲೀಕ ಉಮೇಶ್ ತನ್ನ ಹೊಲಕ್ಕೆ ಬಂದು ನೋಡಿದಾಗ ಮೂಟೆ ಸಿಕ್ಕಿದೆ. ಅದರಲ್ಲಿ ಏನಿದೆ ಎಂದು ತೆರೆದು ನೋಡಿದಾಗ ವಿಗ್ರಹಗಳು ಇರುವುದು ಕಂಡು ಬಂದಿದೆ. ಇನ್ನು ಹತ್ತಿರದಲ್ಲೇ ಫಾರೆಸ್ಟ್‌ ಚೆಕ್ ಪೋಸ್ಟ್‌ ಇದ್ದು ಅಲ್ಲಿ ಕಳ್ಳರು ಸಿಕ್ಕಿ ಬೀಳುವ ಭಯದಲ್ಲಿ ವಿಗ್ರಹಗಳನ್ನ ಎಸೆದು ಹೋಗಿದ್ದಾರೆ ಎನ್ನಲಾಗಿದೆ. ಸದ್ಯ ಜಮೀನು ಮಾಲೀಕ ಉಮೇಶ್ ವಿಗ್ರಹಗಳನ್ನ ಸಾತನೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಸಾತನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *