ವಿಶ್ವಕಪ್​ ಟೂರ್ನಿಯಲ್ಲಿ ಕೇದಾರ್ ಜಾಧವ್ ಯಾಕೆ ಬೇಕು ಗೊತ್ತಾ..?

ಇಂಗ್ಲೆಂಡ್​ನಲ್ಲಿ ನಡೆಯಲಿರೋ ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನು ಎರಡು ವಾರ ಮಾತ್ರ ಬಾಕಿ ಇದೆ.ಹೀಗಿರುವಾಗಲೇ ಆಲ್​ರೌಂಡರ್,​ ಕೇದಾರ್ ಜಾಧವ್ ಇಂಜ್ಯೂರಿ ಟೀಂ ಇಂಡಿಯಾದ ಚಿಂತೆ ಹೆಚ್ಚಿಸಿದೆ.ಐಪಿಎಲ್​ನಲ್ಲಿ ಸಿಎಸ್​ಕೆ ತಂಡದ ಆಟಗಾರನಾಗಿರೋ ಜಾಧವ್,ಕಿಂಗ್ಸ್​ ಇಲೆವೆನ್ ಪಂಜಾಬ್​ ವಿರುದ್ಧದ ಪಂದ್ಯದ ವೇಳೆ ಭುಜದ ನೋವಿಗೊಳಗಾದ್ರು.ಇದರಿಂದಾಗಿ ಪ್ಲೇಆಫ್​ ಪಂದ್ಯಗಳಿಂದ ಹೊರಗುಳಿದ್ರು.ಹೀಗಾಗಿ ವಿಶ್ವಕಪ್ ಆರಂಭವಾಗುವ ಹೊತ್ತಿಗೆ ಜಾಧವ್ ಫಿಟ್​ ಆಗ್ತಾರಾ ಇಲ್ವಾ..?ಅನ್ನೋ ಪ್ರಶ್ನೆ ಮೂಡಿದೆ.ಒಂದು ವೇಳೆ ಭುಜದ ನೋವಿನಿಂದ ಜಾಧವ್ ಚೇತರಿಸಿಕೊಳ್ಳದಿದ್ದರೆ,ಜಾಧವ್ ಬದಲಿಗೆ ಯಾರಿಗೆ ಇಂಗ್ಲೆಂಡ್​ ಟಿಕೆಟ್​ ನೀಡಬೇಕು ಎಂದು ಬಿಸಿಸಿಐ ತಲೆಕೆಡಿಸಿಕೊಂಡಿದೆ.ಸುರೇಶ್​ ರೈನಾರನ್ನ ಜಾಧವ್​ ಸ್ಥಾನದಲ್ಲಿ ಆಯ್ಕೆ ಮಾಡಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.ಆದ್ರೆ, ವಿಶ್ವಕಪ್​ ಟೂರ್ನಿಯಲ್ಲಿ ಜಾಧವ್ ಆಡಲೆಬೇಕು.ಟೀಂ ಇಂಡಿಯಾ ಪರ ಜಾಧವ್ ಪ್ರಮುಖ ಪಾತ್ರವಹಿಸಲಿದ್ದಾರೆ ಎನ್ನುತ್ತಿವೆ ಈ ಅಂಕಿ ಅಂಶಗಳು.ಮಧ್ಯಮ ಕ್ರಮಾಂಕದ ಬ್ಯಾಟ್ಸ್​​​ಮನ್ ಜೊತೆಗೆ ಫಿನಿಶರ್​ ರೋಲ್​ ನಿಭಾಯಿಸುವ ಸಾಮರ್ಥ್ಯವನ್ನ ಜಾಧವ್ ಹೊಂದಿದ್ದಾರೆ.ಸ್ಪಿನ್ ಬೌಲಿಂಗ್ ಮೂಲಕ ಐದನೇ ಬೌಲರ್​​ ನೀಗಿಸಲಿದ್ದು,ಅಗತ್ಯ ಸಂದರ್ಭದಲ್ಲಿ ವಿಕೆಟ್​ ಪಡೆದು ತಂಡಕ್ಕೆ ಯಶಸ್ಸು ತಂದುಕೊಡಬಲ್ಲರು.ಸದ್ಯ ವಿಶ್ವಕ್ರಿಕೆಟ್​ನ ಬೆಸ್ಟ್​ ಆಲ್​ರೌಂಡರ್​ಗಳಲ್ಲಿ ಜಾಧವ್ ನಾಲ್ಕನೇ ಸ್ಥಾನದಲ್ಲಿದ್ದಾರೆ.ಜಾಧವ್ ಬೌಲಿಂಗ್ ಮಾಡಲು ಶುರಮಾಡಿದಾಗಿನಿಂದ ಬೌಲಿಂಗ್​ ಹಾಗು ಬ್ಯಾಟಿಂಗ್ ಎರಡರಲ್ಲೂ ಮಿಂಚಿದ್ದಾರೆ.ಆಲ್​ರೌಂಡರ್ ಆಗಿ ಆಡಿದ 52 ಪಂದ್ಯಗಳಿಂದ 42.83ರ ಸರಾಸರಿಯಲ್ಲಿ 1028 ರನ್​ ಕಲೆಹಾಕಿರುವ ಜಾಧವ್, ಬೌಲಿಂಗ್​ನಲ್ಲಿ 34.7ರ ಸರಾಸರಿಯಲ್ಲಿ ಬೌಲಿಂಗ್​ ಮಾಡಿ, 27 ವಿಕೆಟ್ಸ್​ ಪಡೆದುಕೊಂಡಿದ್ದಾರೆ.ಇನ್ನು, ಜಾಧವ್ ಆಲ್​ರೌಂಡರ್ ಆಗಿ ಬದಲಾದ ನಂತರ ಟೀಂ ಇಂಡಿಯಾ ಆಡಿದ ಪಂದ್ಯಗಳಲ್ಲಿ, ಅತಿಹೆಚ್ಚು ಸ್ಟ್ರೈಕ್​ರೇಟ್​ ಹೊಂದಿರುವ ಬ್ಯಾಟ್ಸ್​ಮನ್​ಗಳ ಪೈಕಿ ಜಾಧವ್ ಎರಡನೇ ಸ್ಥಾನದಲ್ಲಿದ್ದಾರೆ.ಹಾರ್ದಿಕ್ ಪಾಂಡ್ಯಾ,116.8 ಸ್ಟ್ರೈಕ್​ರೇಟ್​ನೊಂದಿಗೆ ಮೊದಲ ಸ್ಥಾನದಲ್ಲಿದ್ರೆ, 101.98ರ ಸ್ಟ್ರೈಕ್​ರೇಟ್​ ಮೂಲಕ ಜಾಧವ್ ಎರಡನೇ ಸ್ಥಾನದಲ್ಲಿದ್ದಾರೆ.