2019ರ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಜೆರ್ಸಿ ಬದಲಾಯಿಸಬೇಕಂತೆ..!

ಈ ಬಾರಿ ಇಂಗ್ಲೆಂಡ್​ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ನಲ್ಲಿ ಕೆಲ ಮಹತ್ವದ ಬದಲಾವಣೆಗಳನ್ನ ಮಾಡಲಾಗಿದೆ. ಮೆಗಾ ಟೂರ್ನಿಯಲ್ಲಿ ಭಾಗವಹಿಸುವ ಕೆಲ ತಂಡಗಳ ಜೆರ್ಸಿಗಳು, ಒಂದಲ್ಲ ಎರಡೆರಡು ಬಾರಿ ಬದಲಾಗಲಿವೆ. ಫುಟ್ಬಾಲ್ ಮಾದರಿಯಲ್ಲಿ ಈ ಬಾರಿಯ ವಿಶ್ವಕಪ್​ನಲ್ಲಿ, ‘ಹೋಂ ಅಂಡ್ ಅವೇ’ ಮಾದರಿಯಲ್ಲಿ ಜೆರ್ಸಿಗಳನ್ನ ಪರಿಚಯಿಸಲಾಗ್ತಿದೆ. ಹೋಂನಲ್ಲಿ ಆಡೋ ತಂಡಗಳ ಜೆರ್ಸಿ ಮತ್ತು ಅವೇನಲ್ಲಿ ಆಡೋ ತಂಡಗಳ ಜೆರ್ಸಿ, ಬೇರೆ ಬೇರೆ ಕಾಣಲಿವೆ. ಹೀಗಾಗಿ ಟೀಮ್ ಇಂಡಿಯಾ ಈ ಬಾರಿ, ಅವೇ ಮ್ಯಾಚ್​ಗಳಲ್ಲಿ ಡಿಫರೆಂಟ್ ಕಲರ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಅವೇನಲ್ಲಿ ಆಡೋ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಆಟಗಾರರು, ಡಾರ್ಕ್ ಬ್ಲೂ ಮತ್ತು ಆರೆಂಜ್ ಕಲರ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ಭಾರತ, ಇಂಗ್ಲೆಂಡ್, ಶ್ರೀಲಂಕಾ ಮತ್ತು ಆಫ್ಘಾನಿಸ್ತಾನ, ಈ ನಾಲ್ಕು ತಂಡಗಳ ಜೆರ್ಸಿ ಬ್ಲೂ ಆಗಿರೋದ್ರಿಂದ, ಇಂಗ್ಲೆಂಡ್ ಹೊರತುಡಿಸಿ ಉಳಿದ ಮೂರು ತಂಡಗಳ ಜೆರ್ಸಿಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳ ಜೆರ್ಸಿ ಕಲರ್ಸ್ ಗ್ರೀನ್ ಆಗಿರೋದ್ರಿಂದ, ಪರ್ಯಾಯ ಬಣ್ಣದ ಜೆರ್ಸಿಯನ್ನ ಈ ಮೂರು ತಂಡಗಳು ಹುಡುಕಬೇಕಿದೆ. ಇನ್ನು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್, ಮೂರು ತಂಡಗಳ ಜೆರ್ಸಿ ಕಲರ್​ ಡಿಫರೆಂಟ್ ಆಗಿರೋದ್ರಿಂದ, ಇವರಿಗೆ ಜೆರ್ಸಿ ಬದಲಾಯಿಸೋ ಅವಕಾಶವಿಲ್ಲ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv