ಸಚಿವ ರೇವಣ್ಣ ಎಸ್ಕಾರ್ಟ್ ವಾಹನದಲ್ಲಿ ಹಣ ಪತ್ತೆ, ತನಿಖೆ ನಡೆಸಲು ವಿಶೇಷಾಧಿಕಾರಿ ಮೌದ್ಗಿಲ್ ಪತ್ರ

ಬೆಂಗಳೂರು: ಹಾಸನದಲ್ಲಿ ಸಚಿವ ರೇವಣ್ಣನ ಎಸ್ಕಾರ್ಟ್ ವಾಹನದಲ್ಲಿ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಮನೀಶ್ ಮೌದ್ಗಿಲ್ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಮೌದ್ಗಿಲ್​, ಲೋಕಸಭಾ ಚುನಾವಣೆಗೆ ನನ್ನನ್ನು ಸ್ಪೆಷಲ್ ಆಫೀಸರ್ ಆಗಿ ಆಯ್ಕೆ ಮಾಡಲಾಗಿತ್ತು. ಈ ಹಿನ್ನೆಲೆ ಇದೇ ತಿಂಗಳ 17 ರಂದು ನಾನು ಹಾಸನ ಜಿಲ್ಲೆಗೆ ಭೇಟಿಕೊಟ್ಟಿದ್ದೆ. ಈ ವೇಳೆ ಇನೋವಾ KA-01 MH-4477 ಕಾರಿನಲ್ಲಿ ಸಾಗಿಸಲಾಗುತ್ತಿದ್ದ ₹1.2 ಲಕ್ಷ ಹಣವನ್ನು ಐಟಿ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ ಸೀಜ್ ಮಾಡಿದ್ರು. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆಕ್ಷನ್ 171 ಸಿ ಅಡಿಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಮಾಹಿತಿಯನ್ನ ಹಾಸನದ ಎಸ್ ಪಿ ನನ್ನ ಗಮನಕ್ಕೆ ತಂದಿದ್ದರು. ತನಿಖೆ ನಡೆಸಿದಾಗ ಈ ವಾಹನ ಪೊಲೀಸ್ ಇಲಾಖೆಗೆ ಸೇರಿದ್ದು ಎಂದು ತಿಳಿದು ಬಂದಿದೆ. CAR ಹೆಡ್ ಕ್ವಾರ್ಟರ್​ನ ಡಿಸಿಪಿ ಗೆ ಈ ವಾಹನ ಸೇರಿದ್ದು ಎಂದು ತಿಳಿದು ಬಂದಿದೆ. ಚುನಾವಣೆಗೆ ಹಣ ಹಂಚಲು ಈ ರೀತಿ ಪೊಲೀಸ್ ಇಲಾಖೆಯ ವಾಹನ ಬಳಸಿಕೊಂಡಿದ್ದು ಎಷ್ಟು ಸರಿ..? ಒಂದು ವೇಳೆ ಇದು ಪೊಲೀಸ್ ಇಲಾಖೆಯದ್ದೇ ಆಗಿದ್ದರೆ ಕಾನೂನು ಅಡಿಯಲ್ಲಿ ಶಿಕ್ಷೆ ಯಾಗಬೇಕು. ಅಲ್ಲದೇ ಈ ಪ್ರಕರಣವನ್ನ ಗಂಭಿರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕೆಂದು ಮನೀಶ್ ಮೌದ್ಗಿಲ್ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರದ ಮುಖೇನ ಮನವಿ ಮಾಡಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv