ವಿಂಗ್​​ ಕಮಾಂಡರ್​ ಅಭಿನಂದನ್​​ ವರ್ಧಮಾನ್​​ ಟ್ರಾನ್ಸ್​​ಫರ್​​..!

ನವದೆಹಲಿ: ಇತ್ತೀಚೆಗೆ ಇಡೀ ಜಗತ್ತಿನ ಕಣ್ಣುಕುಕ್ಕುವಂತೆ ಸಾಹಸ ತೋರಿದ್ದ ಭಾರತೀಯ ವಾಯುಪಡೆಯ ಹೆಮ್ಮೆಯ ಯೋಧ, ವಿಂಗ್​​ ಕಮಾಂಡರ್​ ಅಭಿನಂದನ್​​ ವರ್ಧಮಾನ್ ಅವರನ್ನು​​ ವರ್ಗಾವಣೆ ಮಾಡಲಾಗಿದೆ. ಶ್ರೀನಗರ ವಾಯುನೆಲೆಯಿಂದ ಅವರನ್ನು ದೇಶದ ಪಶ್ಚಿಮ ವಲಯದಲ್ಲಿ, ಪಾಕಿಸ್ತಾನದ ಗಡಿಗೆ ಅಂಟಿಕೊಂಡಿರುವ, ಪ್ರಮುಖ ವಾಯುನೆಲೆಗೆ ವರ್ಗ ಮಾಡಲಾಗಿದೆ. ಈ ಹಿಂದೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಕಾಶ್ಮೀರ ಕಣಿವೆಯಲ್ಲಿ ಅವರ ಜೀವಕ್ಕೆ ಅಪಾಯ ಇದೆಯೆಂಬುದನ್ನು ಗ್ರಹಿಸಿ, ಭಾರತೀಯ ವಾಯುಪಡೆ ಅವರನ್ನು ವರ್ಗ ಮಾಡಿದೆ ಎಂದು ತಿಳಿದುಬಂದಿದೆ.