ಪಕ್ಷದ ವರಿಷ್ಠರ ಆದೇಶದಂತೆ ನಡೆದುಕೊಳ್ಳುವೆ: ನಾರಾಯಣ ಸ್ವಾಮಿ

ತುಮಕೂರು: ಎರಡು ಬಾರಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ ಕೆಲಸ ಮಾಡಿದ್ದೇನೆ. ಶಾಸಕನಾಗಿ ಕೂಡ ಉತ್ತಮ ಕೆಲಸ ಮಾಡಿದ್ದೆ. ಆದ್ರೆ ಈ ಬಾರಿ ಜನರು ನನ್ನ ಕೈ ಹಿಡಿಲಿಲ್ಲ. ಆದರೂ ನಾನು ಕ್ಷೇತ್ರದ ಶಿಕ್ಷಕರ ಜೊತೆಗೆ ಇರುತ್ತೇನೆಂದು ಎಂದು ಬಿಜೆಪಿ ಮಾಜಿ ಶಾಸಕ, ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣ ಸ್ವಾಮಿ ಹೇಳಿದರು.
ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದ ವರಿಷ್ಠರ ಆದೇಶದಂತೆ ನಡೆದುಕೊಳ್ಳುತ್ತೇನೆ. ಶಿಕ್ಷಕರ ಸಮಸ್ಯೆಯನ್ನು ಅರಿತಿದ್ದೇನೆ. ಟಿಕೆಟ್​ ವಂಚಿತ ಹಾಲನ್ನೂರು ಲೇಪಾಕ್ಷಿ ಅವರು ನಮ್ಮ ಜೊತೆಗೆ ಇದ್ದಾರೆ. ಅವರ ಬೆಂಬಲ ಕೂಡ ನಮಗಿದೆ. ಲೇಪಾಕ್ಷಿ ಕೂಡ ಬಿಜೆಪಿಯ ಸಕ್ರೀಯ ಕಾರ್ಯಕರ್ತ ಎಂದು ನಾರಾಯಣ ಸ್ವಾಮಿ ಅಭಿಪ್ರಾಯಪಟ್ಟರು.

ಇನ್ನು ಇದೇ ವೇಳೆ ತುಮಕೂರು ಶಾಸಕ ಜ್ಯೋತಿಗಣೇಶ್ ಮಾತನಾಡಿ, ಪಕ್ಷದಿಂದ ಮೊದಲಿಗೆ ಹಾಲನೂರು ಲೇಪಾಕ್ಷಿಗೆ ಟಿಕೆಟ್​ ನೀಡಲಾಗಿತ್ತು. ಆದ್ರೆ ವೈ.ಎನ್​. ನಾರಾಯಣ ಸ್ವಾಮಿ ವಿಧಾನಸಭೆ ಚುನಾವಣೆಯಲ್ಲಿ ಸೋತ ಕಾರಣ ಅವರಿಗೆ ಲೇಪಾಕ್ಷಿಗೆ ನೀಡಿದ್ದ ಬಿ. ಫಾರಂ ವಾಪಸ್​​ ಪಡೆದು ನಾರಾಯಣ ಸ್ವಾಮಿಗೆ ಪಕ್ಷದ ವರಿಷ್ಠರು ನೀಡಿದ್ದಾರೆ ಎಂದು ಶಾಸಕ ಜ್ಯೋತಿ ಗಣೇಶ್​ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv