2 ದಿನಗಳಲ್ಲಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡ್ತೇನೆ: ಸತೀಶ್​ ಸ್ಪಷ್ಟನೆ

ಬೆಳಗಾವಿ: 2 ದಿನಗಳಲ್ಲಿ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಚಿವ ಸ್ಥಾನ ವಂಚಿತ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಹಂತದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ಒಂದು ವೇಳೆ ಕೊಟ್ಟರು ತೆಗೆದುಕೊಳ್ಳಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಹುದ್ದೆ ಬೇಡ. ಸಾಮಾನ್ಯ ಶಾಸಕನಾಗಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.

ಎಂ.ಬಿ.ಪಾಟೀಲ್ ಹೈಕಮಾಂಡ್ ಭೇಟಿ ಬಗ್ಗೆ ಮಾತನಾಡಿದ ಅವರು, ಎಂ.ಬಿ.ಪಾಟೀಲ್​ ಅತೃಪ್ತ ಶಾಸಕರ ಪರ ವಕಾಲತ್ತು ವಹಿಸಲು ದೆಹಲಿಗೆ ತೆರಳಿದ್ದಾರೆ.‌ ಎಂ.ಬಿ ಪಾಟೀಲ್​​​ಗೆ ಹೈಕಮಾಂಡ್ ಏನು ಸಂದೇಶ ಕೊಡುತ್ತೊ ಕಾದು ನೋಡೋಣ. ಈ ಕುರಿತು ಇದೇ 11ಕ್ಕೆ ಅತೃಪ್ತ ಶಾಸಕರ ಸಭೆಯಲ್ಲಿ ಚರ್ಚಿಸ ಲಾಗುವುದು ಎಂದು ತಿಳಿಸಿದರು.
ಸಚಿವ ಸ್ಥಾನ ಬಿಟ್ಟು ಕೊಡುತ್ತೇನೆ ಎನ್ನುವ ರಮೇಶ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಮೇಶ್​​ ಸುಮ್ಮನೆ ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಾನೆ. ಯಾವಾಗಲೂ ಹೇಳಿಕೆಗೆ ವಿರುದ್ಧವಾಗಿರುತ್ತಾನೆ ಎಂದು ತಿರುಗೇಟು ನೀಡಿದರು. ಕಳೆದ 40 ವರ್ಷಗಳಿಂದ ನಾನು ಅವರು ಹತ್ತಿರದಿಂದ ನೋಡಿದ್ದೇನೆ. ಅಂತಹ ಹೇಳಿಕೆ ಬಗ್ಗೆ ನಾನು ಜಾಗೃತನಾಗಿದ್ದೇ‌ನೆ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv