ನಾನು ನೆಮ್ಮದಿಯ ಸಾವು ಬಯಸುತ್ತೇನೆ: ಹೆಚ್​​. ಡಿ ದೇವೇಗೌಡ

ರಾಮನಗರ: ರಾಮನಗರ ವಿಧಾನಸಭಾ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರಿದೆ. ಜೆಡಿಎಸ್​​ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋದ ಸಂದರ್ಭ ಮತದಾರರು ಕೇಳಿದ ಪ್ರಶ್ನೆಗಳಿಗೆ ಜೆಡಿಎಸ್​ ವರಿಷ್ಠ ಹೆಚ್​​. ಡಿ. ದೇವೇಗೌಡರು ಸ್ವಾಗತಿಸಿದ್ದಾರೆ.

ರಾಮನಗರದ ಹಳ್ಳಿಮಾಳ ಗ್ರಾಮದಲ್ಲಿ ಬಹಿರಂಗ ಪ್ರಚಾರದಲ್ಲಿ ಮಾತನಾಡಿದ ಅವರು, ಸರ್ಕಾರದ ಕೆಲವು ಭಾವನೆಗಳು ಜನರ ಪರವಿದೆ ಅಂತಾ ಹೇಳಲ್ಲ. ದೇಶದ ಹಲವು ಪಕ್ಷಗಳು ಒಗ್ಗಟ್ಟು ಪ್ರದರ್ಶನಕ್ಕಾಗಿ ನಾನು ಮೈತ್ರಿ ಸರ್ಕಾರಕ್ಕೆ ಅನುಮತಿ ಕೊಟ್ಟಿದ್ದೇನೆ. ಕಳೆದ ಬಾರಿ ನಂಜನಗೂಡು ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋತಿದ್ದರು. ಹೀಗಾಗಿ ಕಾಂಗ್ರೆಸ್​​​ ಗೆಲ್ಲಲಿ ಎಂದು ಕುಮಾರಸ್ವಾಮಿಗೆ ಜೆಡಿಎಸ್​ ಅಭ್ಯರ್ಥಿಯನ್ನು ಹಾಕದಂತೆ ತಿಳಿಸಿದ್ದೆ ಎಂದರು.

ಜೀವನದ ಅಂತ್ಯದಲ್ಲಿ ನೆಮ್ಮದಿಯ ಸಾವು ಬಯಸುತ್ತೇನೆ:
ನಾನೊಬ್ಬ ಹಠವಾದಿ. ಹಾಗಾಗಿ ನೆಮ್ಮದಿಯ ಅಂತ್ಯ ಕಾಣಬೇಕಿದೆ. ಜೀವನದ ಅಂತ್ಯದಲ್ಲಿ ನೆಮ್ಮದಿಯ ಸಾವು ಬಯಸುತ್ತೇನೆ. ಇನ್ನೂ ಮಾಡಬೇಕಾದ ಕೆಲಸ ತುಂಬ ಇದೆ. ರಾಜ್ಯದಲ್ಲಿ ಕಾಂಗ್ರೆಸ್​​- ಜೆಡಿಎಸ್ ಹೊಂದಾಣಿಕೆ ಆಗಿವೆ. ನಮ್ಮ ವೈರತ್ವ ಮರೆಯಬೇಕು. ನಾನು ಉದ್ವೇಗದ ಭಾಷಣ ಮಾಡಲ್ಲ. ವ್ಯಕ್ತಿ ನಿಂದನೆ ಮಾಡಲ್ಲ. ಬದಲಾಗಿ ದೋಸ್ತಿ ಸರ್ಕಾರದ ಬಗ್ಗೆ ಮಾತನಾಡಲು ಬಂದಿದ್ದೇನೆ. ಕ್ಷೇತ್ರದಲ್ಲಿ ಅಕ್ಟೋಬರ್​​ 31 ಇಲ್ಲವೇ ನವೆಂಬರ್​​ 01ರಂದು ದೊಡ್ಡ ಮಟ್ಟದ ಬಹಿರಂಗ ಸಭೆ ಮಾಡುವ ಆಸೆ ಇದೆ ಎಂದು ಹೇಳಿದರು.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ:firstnews.tv