ಗುತ್ತಿಗೆದಾರನ ಮನೆ ಮೇಲೆ ಐಟಿ ದಾಳಿ ಮುಕ್ತಾಯ

ಧಾರವಾಡ : ಗುತ್ತಿಗೆದಾರನ ಮನೆ ನಡೆದ ಐಟಿ ದಾಳಿ ನಿರಂತರ 24 ಗಂಟೆಯ ದಾಖಲಾತಿ ಪರಿಶೀಲನೆ ಬಳಿಕ ಮುಕ್ತಾಯವಾಗಿದೆ. ನಿನ್ನೆ ಬೆಳಿಗ್ಗೆ  6 ಗಂಟೆಗೆ ಧಾರವಾಡದ ಸಂಪಿಗೆ ನಗರದ 2ನೇ ಕ್ರಾಸನಲ್ಲಿರುವ ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಟಿ.ರೆಡ್ಡಿ ಮನೆ ಹಾಗೂ ಕಚೇರಿ ಮೇಲೆ ಐಟಿ ದಾಳಿ ನಡೆದಿತ್ತು. ದಾಳಿ ವೇಳೆ ಕೆಜಿಗಟ್ಟಲೆ ಬಂಗಾರ ಸಿಕ್ಕಿದೆ ಎಂದು ಐಟಿ ಇಲಾಖೆಯಿಂದ ತಿಳಿದುಬಂದಿದೆ. ಬೆಂಗಳೂರು ಹಾಗೂ ಹುಬ್ಬಳ್ಳಿ ಮೂಲದ ಸುಮಾರು 8 ಮಂದಿ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿ, ನಿನ್ನೆ ತಡರಾತ್ರಿವರಗೂ ತನಿಖೆ ಮುಂದುವರೆಸಿದ್ದರು.

ಆಂಧ್ರಪ್ರದೇಶದ ಮೂಲದ ಬಿ.ಟಿ.ರೆಡ್ಡಿ ಸುಮಾರು 25 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಜಿಲ್ಲೆಯಮಟ್ಟಿಗೆ ಅತೀ ದೊಡ್ಡ ಗುತ್ತಿಗೆದಾರನಾಗಿರುವ ಬಿ.ಟಿ.ರೆಡ್ಡಿ ಸಾಕಷ್ಟು ಹೆಸರು ಮಾಡಿದ್ದಾರೆ. ಐಟಿ ದಾಳಿ ವೇಳೆ ಬಿ.ಟಿ ರೆಡ್ಡಿ ಮನೆಯಲ್ಲಿದ್ದು, ಅಧಿಕಾರಿಗಳಿಗೆ ಸಹಕಾರ ಕೊಟ್ಟಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv