ನ್ಯಾಯಾಲಯದ ಆದೇಶವನ್ನ ಗೌರವಿಸ್ತೀನಿ: ವಿದ್ವತ್​ ಪರ ವಕೀಲ ಶಾಮ್‌ ಸುಂದರ್‌

ಬೆಂಗಳೂರು: ಉದ್ಯಮಿ ಲೋಕನಾಥ್​ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ನಲಪಾಡ್ ಜೈಲು ಸೇರಿದ್ದ. 116 ದಿನಗಳ ಕಾಲ ಜೈಲು ಹಕ್ಕಿಯಾಗಿದ್ದ ಶಾಸಕ ಹ್ಯಾರಿಸ್​ ಪುತ್ರ ನಲಪಾಡ್​ಗೆ ಇಂದು ಹೈಕೋರ್ಟ್​ ಜಾಮೀನು ನೀಡಿದೆ.

ಈ ಸಂಬಂಧ ಮಾತನಾಡಿದ ವಿದ್ವತ್​ ಪರ ವಕೀಲ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಶಾಮ್‌ ಸುಂದರ್‌, ನಲಪಾಡ್​ಗೆ ನ್ಯಾಯಾಲಯ ಇಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಇನ್ನು ನಲಪಾಡ್​ ಪರ ವಕೀಲರಾದ ಬಿವಿ ಆಚಾರ್ಯ, ಪಾಸ್​ಪೋರ್ಟ್ ಅನ್ನು ನಲಪಾಡ್​ನ ವಶಕ್ಕೆ ಕೊಡಬೇಕೆಂದು ವಾದ ಮಂಡಿಸಿದ್ರು. ಆದ್ರೆ ಕೋರ್ಟ್ ಅವರ ಮನವಿಯನ್ನು ತಳ್ಳಿಹಾಕಿದೆ ಎಂದರು.
ನಿನ್ನೆಯೇ ಕೋರ್ಟ್​ನಲ್ಲಿ ಎಲ್ಲಾ ವಿಚಾರಣೆ ಮುಗಿದಿತ್ತು. ಆರೋಪಿ ಪರವಾಗಿ ಬಿವಿ ಆಚಾರ್ಯ ವಾದ ಮಂಡಿಸಿದ್ರು. ವಿಚಾರಣೆ ಆಲಿಸಿದ ಹೈಕೋರ್ಟ್​ ಇಂದು ನಲಪಾಡ್​ಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ. ಆತನಿಗೆ ಸಾಮಾನ್ಯ ಷರತ್ತುಗಳನ್ನೇ ವಿಧಿಸಿದೆ. ಹಲವು ಪ್ರತ್ಯಕ್ಷ ಸಾಕ್ಷಿಗಳಿರೋದ್ರಿಂದ ಸಾಕ್ಷಿ ನಾಶ ಮಾಡಬಾರದು. ಸಾಕ್ಷಿಗಳ ಮೇಲೆ ಒತ್ತಡ ಹೇರುವ ಮತ್ತು ಹೆದರಿಸುವಂತಿಲ್ಲ. ಹೀಗೆ ಕೆಲ ಶರತ್ತುಗಳ ಮೇಲೆ ಜಾಮೀನು ಮಂಜೂರಾಗಿದೆ. ನ್ಯಾಯಾಲಯದ ಆದೇಶವನ್ನ ಗೌರವಿಸ್ತೀನಿ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಶಾಮ್‌ ಸುಂದರ್‌ ಹೇಳಿದರು.
ಇನ್ನು ನಲಪಾಡ್ ಪರ ವಕೀಲ ಮೊಹಮ್ಮದ್ ಉಸ್ಮಾನ್ ಮಾತನಾಡಿ, ಉಚ್ಚನ್ಯಾಯಾಲಯದ ಆದೇಶ ಪ್ರತಿ ಇನ್ನೂ ಸಿಕ್ಕಿಲ್ಲ. ಎಲ್ಲವೂ ಕೈಗೂಡಿದ್ರೆ ಇಂದೇ ನಲಪಾಡ್​ ಬಿಡುಗಡೆಯಾಗಲಿದ್ದಾರೆ ಎಂದು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv