’ನಾನೊಬ್ಬ ರಾಜಕಾರಣಿ ಎಂದು ಹೇಳಲು ನಾಚಿಕೆ ಆಗುತ್ತಿದೆ‘

ಬೆಳಗಾವಿ: ನಾನೊಬ್ಬ ರಾಜಕಾರಣಿ ಎಂದು ಹೇಳಲು ನಾಚಿಕೆ ಆಗುತ್ತಿದೆ. ಕರ್ನಾಟಕದ ರಾಜಕಾರಣ ತೀರಾ ಕೆಳಮಟ್ಟಕ್ಕೆ ಹೋಗಿದೆ. ಶಾಸಕರ ಖರೀದಿ ವ್ಯವಹಾರ ನೋಡಿ ಬೇಸರವಾಗಿದೆ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸವರಾಜ್ ರಾಯರೆಡ್ಡಿ, ಬಿಜೆಪಿಯವರು ಒಂದು ಕಡೆ ಪ್ರಾಮಾಣಿಕರು, ದೇಶಭಕ್ತರು ಎನ್ನುತ್ತಾರೆ. ಆದರೇ ಏನಿದು ಆಪರೇಷನ್ ಕಮಲ ವ್ಯವಹಾರ ಎಂದು ಅವರು ಪರೋಕ್ಷವಾಗಿ ವಿಪಕ್ಷ ನಾಯಕರ ಬಿ.ಎಸ್ ಯಡಯೂರಪ್ಪನವರ ವಿರುದ್ಧ ರಾಯರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು, ಕಾಂಗ್ರೆಸ್ ಪಕ್ಷದ ನಾಲ್ವರು ಶಾಸಕರು ನಾಪತ್ತೆ ಆಗಿರೋದು ಖಂಡನೀಯ. ಪಕ್ಷ ಅವರ ವಿರುದ್ಧ ಶಿಸ್ತು ಕ್ರಮದ ಬಗ್ಗೆ ನಿರ್ಧರಿಸಲಿದೆ ಎಂದು ಇದೇ ವೇಳೆ ರಾಯರೆಡ್ಡಿ ಹೇಳಿದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv