ನಾನು ಪಾರ್ಟಿಗಾಗಿ ಹೋಗಿರಲಿಲ್ಲ-ಗೂಳಿಹಟ್ಟಿ ಶೇಖರ್

ಬೆಂಗಳೂರು: ಮಾಜಿ ಶಾಸಕ ಸುಧಾಕರ್​ ಅವರನ್ನ ಹೋಟೆಲ್​ಗೆ ಬಿಡಲು ತೆರಳಿದ ವೇಳೆ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಅಂತ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್​ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸುಧಾಕರ್​ ಅವರನ್ನ ಡ್ರಾಪ್ ಮಾಡಲು ಖಾಸಗಿ ಹೋಟೆಲ್​ಗೆ ಹೋಗಿದ್ದಾಗಲೇ ನನಗೆ ಗೊತ್ತಾಗಿದ್ದು ಅಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ‌ಮತ್ತು ಜೆಡಿಎಸ್‌ ಶಾಸಕರಿಗೆ ಪಾರ್ಟಿ ಏರ್ಪಡಿಸಿದ್ದಾರೆಂದು. ಅದಕ್ಕೂ ಮೊದಲು ನಂಗೆ ಈ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಹೇಳಿದರು.

ಅಲ್ಲದೇ ನಾನು ಹೋಟೆಲ್​ನಲ್ಲಿ 20 ನಿಮಿಷವಿದ್ದು, ವಾಪಸ್ ಬಂದೆ. ಹತ್ತು ಹತ್ತು ರೂಪಾಯಿ ದುಡ್ಡು ಹಾಕಿ ಜನ ನನ್ನನ್ನ ಗೆಲ್ಲಿಸಿದ್ದಾರೆ. ನಾವು ಈಗಾಗಲೇ ನೊಂದು ಬೆಂದು ಹೋಗಿದ್ದೇವೆ. ಬಿ.ಎಸ್​.ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೆ ಬಿಜೆಪಿಗೆ ಕರೆ ತಂದಿದ್ದಾರೆ. ಹಾಗಾಗಿ ನಾನು ಬಿಜೆಪಿ ಬಿಟ್ಟು ಹೋಗುವ ಪ್ರಶ್ನೆ ಇಲ್ಲ. ನಿನ್ನೆ ಅಲ್ಲಿ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv