ಡಿಕ್ಟೇಟರ್ ದೀದಿ ಕೈಯಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ -ವಿವೇಕ್ ಒಬೆರಾಯ್

ಬಾಲಿವುಡ್ ನಟ ವಿವೇಕ್ ಒಬೆರಾಯ್ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಮತಾ ಬ್ಯಾನರ್ಜಿಯವರ ಎಡಿಟೆಡ್​ ಫೋಟೋ ಪೋಸ್ಟ್ ಮಾಡಿ ಬಂಧನಕ್ಕೀಡಾಗಿ ಇಂದು ಜಾಮೀನಿನ ಮೇಲೆ ಹೊರಬಂದಿರೋ ಪ್ರಿಯಾಂಕಾ ಶರ್ಮಾ ಪ್ರಕರಣ ಮತ್ತು ಬಿಜೆಪಿ ನಾಯಕ ತೇಜಿಂದರ್ ಬಗ್ಗಾ ಅವರನ್ನು ನಿನ್ನೆ ಪಶ್ಚಿಮ ಬಂಗಾಲ ಪೊಲೀಸರು ಬಂಧಿಸಿರುವ ಪ್ರಕರಣವನ್ನು ಅವರು ಉಲ್ಲೇಖಿಸಿ ಟ್ವೀಟ್ ಬಾಣ ಬಿಟ್ಟಿದ್ದಾರೆ.

ಇಂದು ತಮ್ಮ ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ದೀದಿಯಂತಹ ಗೌರವಾನ್ವಿತ ಮಹಿಳೆ, ಸದ್ದಾಂ ಹುಸೇನ್ ರೀತಿ ಯಾಕೆ ವರ್ತಿಸುತ್ತಿದ್ದಾರೆ? ಎಂದು ನನಗೆ ಅರ್ಥವಾಗ್ತಿಲ್ಲ. ವಿಪರ್ಯಾಸವೆಂದರೆ ಸರ್ವಾಧಿಕಾರಿಯಂತೆ ದೀದಿಯಿಂದಲೇ ಪ್ರಜಾಪ್ರಭುತ್ವ ಅಪಾಯದಲ್ಲಿದೆ.  ಮೊದಲು ಪ್ರಿಯಾಂಕಾ ಶರ್ಮಾ, ಮತ್ತೀಗ ತೇಜಿಂದರ್ ಬಗ್ಗಾ. ಈ ದೀದಿಗಿರಿ ನಡೆಯಲ್ಲ. #SaveBengalSaveDemocracy #FreeTajinderBagga ಎಂದು ಹೇಳಿದ್ದಾರೆ. ವಿವೇಕ್ ಓಬೆರಾಯ್ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ನಿನ್ನೆ ಕೊಲ್ಕತ್ತಾದಲ್ಲಿ ರೋಡ್ ಶೋ ವೇಳೆ ಗುಂಪುಘರ್ಷಣೆ ನಡೆದಿತ್ತು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv