ವೇಗಿ ಮೊಹಮ್ಮದ್ ಶಮಿ 2ನೇ ಮದ್ವೆಗೆ ರೆಡಿ ನಾ..?

ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನ್ ಜಹಾನ್ ನಡುವಿನ ಕುಟುಂಬ ಕಲಹ ಮುಗಿಯದ ಅಧ್ಯಾಯವಾಗಿದೆ. ಐಪಿಎಲ್​​​​​​​​​​​​​​​​​​​​​ ಆರಂಭಕ್ಕೂ ಮುನ್ನವೇ ಶಮಿಯನ್ನ ಕಟ್ಟಿಕಾಡಿದ್ದ ಜಹಾನ್, ಇದೀಗ ಶಮಿಗೆ ಮತ್ತೊಂದು ಬೌನ್ಸರ್​​​ ಎಸೆದಿದ್ದಾಳೆ.

2ನೇ ಇನ್ನಿಂಗ್ಸ್​​ ಆರಂಭಿಸ್ತಾರಾ ಶಮಿ..?
ಮೊಹಮ್ಮದ್ ಶಮಿ ಹಸೀನ್ ಜಹಾನ್​​​​​​​​ಗೆ ಡಿವೋರ್ಸ್ ನೀಡಿ 2ನೇ ಮದುವೆಗೆ ಸಜ್ಜಾಗಿದ್ದಾರಾ ಅನ್ನೋ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ ಹಸೀನ್ ಜಹಾನ್. ‘ಶಮಿ ತಮ್ಮ ಹತ್ತಿರದ ಸಂಬಂಧಿಯೊಬ್ಬಳನ್ನ ಮದುವೆಯಾಗುತ್ತಿದ್ದಾರೆ. ರಂಜಾನ್ ಆದ ಬಳಿಕ ಶಮಿ 2ನೇ ಮದುವೆ ಆಗಲು ತಯಾರಿ ನಡೆಸಿದ್ದಾರೆ. ಇದಕ್ಕಾಗಿ ನನಗೆ ಹಣದ ಆಮಿಷ ತೋರಿಸಿ ಡಿವೋರ್ಸ್ ಕೇಳಿದ್ದಾರೆ’ ಅಂತ ಹಸೀನ್ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾಳೆ. ಆದ್ರೆ ಹಸೀನ್ ಜಹಾನ್​​​​​​​​ನ ಆರೋಪವನ್ನ ಶಮಿ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ‘ಸಂದರ್ಶನವೊಂದರಲ್ಲಿ ಮಾತನಾಡಿದ ಶಮಿ, ಒಂದು ಮದುವೆಯಾಗಿ ಇಷ್ಟೊಂದು ತೊಂದರೆ ಅನುಭವಿಸುತ್ತಿದ್ದೇನೆ. ಇನ್ನೊಂದು ಮದುವೆಯಾಗಲು ನಾನೇನು ಹುಚ್ಚ ನಾ. ಹಾಗೇನಾದ್ರೂ 2ನೇ ಮದುವೆ ಆದ್ರೆ ಕಳೆದ 5 ತಿಂಗಳಿಂದ ನನ್ನ ಮೇಲೆ ಆರೋಪಗಳನ್ನ ಮಾಡಿ ಹಸೀನ್​​​​​​​​​​​​​ ಜಹಾನ್​​​​​​ಳನ್ನ ಆಹ್ವಾನಿಸುತ್ತೇನೆ’ ಅಂತ ಹಾಸ್ಯ ಚಟಾಕಿ ಹಾರಿಸಿದ್ರು. ಇನ್ನು ಕುಟುಂಬ ಕಲಹ ಕಾರಣದಿಂದಾಗಿ ಈ ಬಾರಿಯ ಐಪಿಎಲ್​​​ನಲ್ಲಿ ಉತ್ತಮ ಪರ್ಫಾರ್ಮೆನ್ಸ್ ನೀಡಲು ಸಾಧ್ಯವಾಗಿಲ್ಲ. ಆದ್ರೆ, ಮುಂದಿನ ಇಂಗ್ಲೆಂಡ್​ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತೇನೆ ಆ ಕಾನ್ಫಿಡೆಂಟ್​​​​​ ಇದೆ ಎಂದು ಹೇಳಿದ್ದಾರೆ.