ನಿಖಿಲ್ ಪರ ಮತ ಯಾಚನೆಗೆ ಬಂದಿದ್ದೇನೆ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

ಮಂಡ್ಯ: ಮಂಡ್ಯ ಜನತೆಗೆ ನಮಸ್ಕಾರಗಳು, ದೇವೇಗೌಡರ ಮೊಮ್ಮಗ, ಸಿಎಂ ಕುಮಾರಸ್ವಾಮಿ ಪುತ್ರ ಜಾಗ್ವಾರ್ ನಿಖಿಲ್ ಕುಮಾರಸ್ವಾಮಿ ಪರ ಮತ ಯಾಚನೆಗೆ ಬಂದಿದ್ದೇನೆ ನಾನು ಇಲ್ಲಿಗೆ ಬಂದಿದ್ದೇನೆ. ಒಂದು ತಿಂಗಳಿಂದ ನಾನು ಅನುಭವಿಸಿದ ಕಷ್ಟ, ನೋವು ಇಲ್ಲಿಗೆ ಬಂದಾಗ ಮಾಯವಾಗಿದೆ. ಕೃಷ್ಣದೇವರಾಯ ತೆಲುಗು ಭಾಷಿಕರಿಗೆ ಅಚ್ಚುಮೆಚ್ಚು. ನಮ್ಮ ನಾಯಕ ಎನ್‌ಟಿಆರ್‌ಗೆ ಡಾ.ರಾಜ್‌ಕುಮಾರ್ ಅಂದ್ರೆ ಹೆಚ್ಚು ಪ್ರೀತಿ.  ಬೆಂಗಳೂರು ಮೈಸೂರು ಅಂದ್ರೆ ತೆಲುಗು ಜನಕ್ಕೆ ಹೆಚ್ಚಿನ ಆಸೆ. ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಿದ ಕೆಆರ್‌ಎಸ್ ಅಣೆಕಟ್ಟೆ ರೈತರಿಗೆ ವರದಾನವಾಗಿದೆ ಎಂದು ಪಾಂಡವಪುರದಲ್ಲಿ ನಡೆದ ಮೈತ್ರಿ ಸಮಾವೇಶದಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv