ಪಕ್ಷಕ್ಕಾಗಿ ದುಡಿದಿದ್ದೇನೆ, ಟಿಕೆಟ್ ಸಿಗುವ ವಿಶ್ವಾಸವಿದೆ: ಶಾಕೀರ್ ಸನ್ನದಿ

ಹುಬ್ಬಳ್ಳಿ: ನಾನು ಪಕ್ಷಕ್ಕಾಗಿ ದುಡಿದಿದ್ದೇನೆ ಹೀಗಾಗಿ ನನಗೆ ಟಿಕೆಟ್ ಕೊಡ್ತಾರೆ ಎನ್ನುವ ವಿಶ್ವಾಸವಿದೆ ಎಂದು ಧಾರವಾಡ ಲೋಕಸಭೆ ಮೈತ್ರಿ ಟಿಕೆಟ್​ ಆಕಾಂಕ್ಷಿ ಶಾಕೀರ್ ಸನ್ನದಿ  ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಕೀರ್ ಸನ್ನದಿ, ಸ್ಥಳೀಯರಿಗೆ ನಾನು ಪರಿಚಯ ಇಲ್ಲ ಎನ್ನುವ ತಪ್ಪು ಕಲ್ಪನೆ ಇದೆ. ಈ ಹಿಂದೆ ಈ ತರಹದ ಕಲ್ಪನೆಗಳು ನಮ್ಮ ಸಾಕಷ್ಟು ನಾಯಕರ ಬಗ್ಗೆಯೂ ಕೇಳಿ ಬಂದಿದ್ದವು. ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ವಿನಯ್ ಕುಲಕರ್ಣಿಯವರು ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧೆ ಮಾಡುವ ಸಂದರ್ಭದಲ್ಲಿ  ಇದೇ ಮಾತುಗಳು ಕೇಳಿ ಬಂದಿದ್ದವು. ಹೊಸ ಮುಖ ಅಂದ ಮೇಲೆ ಈ ತರಹದ ಪ್ರಶ್ನೆಗಳು ಊಹಾಪೋಹಗಳು ಸಹಜ. ಮೊದಲ ಬಾರಿಗೆ ಟಿಕೇಟ್ ಕೇಳಿದಾಗ ಎಲ್ಲರು ಇಂತಹ ಆರೋಪ ಎದುರಿಸಿರುತ್ತಾರೆ. ರಾಜ್ಯದಲ್ಲಿ ಎರಡು ಸೀಟ್​ಗಳು ಅಲ್ಪಸಂಖ್ಯಾತರಿಗೆ ಮೀಸಲು ಇದೆ. ಅದನ್ನು ಈ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ಪಾಲಿಸಿಕೊಂಡು ಬಂದಿದೆ ಎಂದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv