ನನ್ನ ಹೆಂಡತಿಯನ್ನ ನಂಬಿ ಮೋಸ ಹೋಗಬೇಡಿ -ನೊಂದ ಪತಿರಾಯ

ದಾವಣಗೆರೆ: 11 ಬಾರಿ ಪರ ಪುರುಷನ ಜತೆ ಓಡಿ ಹೋದ ತನ್ನ ಹೆಂಡತಿಯನ್ನು ನಂಬಿ ಮೋಸ ಹೋಗಬೇಡಿ ಎಂದು ನೊಂದ ಪತಿಯೊಬ್ಬರು ಮನವಿ ಮಾಡಿಕೊಳ್ಳುತ್ತಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಗೋಪಿಕೃಷ್ಣ ದಾವಣಗೆರೆಯ ನಿವಾಸಿ. ಇವರು ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ.ಇವರಿಗೆ 4 ವರ್ಷದ ಹಿಂದೆ  ಕಾವ್ಯ ಎಂಬುವವರ ಜತೆ ಮದುವೆಯಾಗಿತ್ತು. ವಿಚಿತ್ರವೆಂದರೆ, ಗೋಪಿಕೃಷ್ಣ ಅವರ ಹೆಂಡತಿ ನಾಲ್ಕು ವರ್ಷದಲ್ಲಿ 11 ಬಾರಿ ಪತಿಯನ್ನ ಬಿಟ್ಟು ಹೋಗಿದ್ದಾರಂತೆ. ಈ ಹಿಂದೆ ಬೇರೆಯೊಬ್ಬರ ಜತೆ ಪತ್ನಿ ಹೋಗಿದ್ದಾಗ ಗೋಪಿಕೃಷ್ಣ ಕರೆತಂದಿದ್ದರು. ಆದ್ರೆ ಮತ್ತೆ ಒಂದು ವಾರದಿಂದ ಬೇರೊಬ್ಬನ ಜತೆ ಕಾವ್ಯ ನಾಪತ್ತೆಯಾಗಿದ್ದಾರೆ.

ಹೀಗೆ 11 ಬಾರಿ  ಕಾವ್ಯ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಬೆಂಗಳೂರು, ಹುಬ್ಬಳ್ಳಿ ವಿವಿಧೆಡೆ ಹೆಂಡತಿಗಾಗಿ ಗೋಪಿಕಷ್ಣ ಹುಡುಕಾಟ ನಡೆಸಿದ್ದಾರೆ. ತನ್ನ ಹೆಂಡತಿ ನಂಬಿ ಮೋಸ ಹೋಗಬೇಡಿ ಎಂದು ನೊಂದ ಪತಿರಾಯ ಮನವಿ ಮಾಡಿಕೊಳ್ಳುತ್ತಿದ್ದಾರೆ. ಗೋಪಿಕೃಷ್ಣ ತಮ್ಮ ಹೆಂಡತಿಯ ಪೋಟೋ ಹಿಡಿದು ತನ್ನ ಹೆಂಡತಿ ನಂಬಿ ಮೋಸ ಹೋಗದಂತೆ  ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದ್ರಿಂದ ಬೇಸತ್ತು ಗೋಪಿಕೃಷ್ಣ ಆತ್ಮಹತ್ಯೆಗೂ ಯತ್ನಿಸಿದ್ದರು ಎನ್ನಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv