ಅನೈತಿಕ ಸಂಬಂಧ ಶಂಕೆ: ಸೀಮೆಎಣ್ಣೆ ಸುರಿದು ಪತ್ನಿಗೆ ಬೆಂಕಿಯಿಟ್ಟ ಪಾಪಿ ಪತಿ

ಕಲಬುರ್ಗಿ: ಪತ್ನಿ ಮೇಲೆ ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಗಂಡನೇ ಹೆತ್ತವರ ಜೊತೆ ಸೇರಿ ಪತ್ನಿಗೆ ಬೆಂಕಿ ಹಚ್ಚಿದ ಘಟನೆ ಆಳಂದ ತಾಲೂಕಿನ ಕೂಡಲಹಂಗರಗಾ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಶಾರದಾಬಾಯಿ(20) ಅವರ ಮುಖ ಸೇರಿದಂತೆ ದೇಹದ ಬಹುತೇಕ ಭಾಗಗಳು ಸುಟ್ಟು ಹೋಗಿದ್ದು, ಅವರನ್ನು ಕಲಬುರ್ಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಶಾರದಾಬಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಒಂದು ವರ್ಷದ ಹಿಂದೆ ಕೊಡಲಹಂಗರಗಾದ ವೀರಣ್ಣ ಜೊತೆ ಶಾರದಾಬಾಯಿ ವಿವಾಹ ಆಗಿತ್ತು. ಒಕ್ಕಲುತನ ಕೆಲಸ ಮಾಡಿಕೊಂಡಿದ್ದ ವೀರಣ್ಣ, ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ನಿನ್ನೆ ಬೆಳಗ್ಗೆ ವೀರಣ್ಣ, ತಾಯಿ ನೀಲಮ್ಮ ಹಾಗೂ ತಂದೆ ಗುಂಡಪ್ಪನ ಜೊತೆ ಸೇರಿ ಪತ್ನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಬಳಿಕ ಕಲಬುರ್ಗಿ ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಶಾರದಾ ಅವರನ್ನು ಸೇರಿಸಿ ಗಂಡ ಮತ್ತು ಅತ್ತೆ-ಮಾವ ಪರಾರಿಯಾಗಿದ್ದಾರೆ. ನಿನ್ನ ನಡತೆ ಸರಿಯಿಲ್ಲ ಅಂತ ವೀರಣ್ಣ ವಿನಾಕಾರಣ ಜಗಳ ಮಾಡಿ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv