ತ್ರಿವೇಣಿ ಸಂಗಮ ಜಲಾವೃತ, ಹುಣಸೂರು-ಗೋಣಿಕೊಪ್ಪ ಹೆದ್ದಾರಿ ಬಂದ್!

ಕೂಡಗು: ಮಳೆಯ ಅಬ್ಬರದಿಂದ ಭಾಗಮಂಡಲ ತ್ರಿವೇಣಿ ಸಂಗಮ ಮತ್ತೆ ಜಲಾವೃತವಾಗಿದೆ. ಇನ್ನು, ರಸ್ತೆಯ ಮಣ್ಣು ಕುಸಿದಿರುವ ಕಾರಣ ಹುಣಸೂರು-ಗೋಣಿಕೊಪ್ಪ ರಾಜ್ಯ ಹೆದ್ದಾರಿ ಬಂದ್ ಆಗಿದೆ. ಅದ್ದರಿಂದ ಮೈಸೂರು-ಪಿರಿಯಾಪಟ್ಟಣ ಮಾರ್ಗವಾಗಿ ಗೋಣಿಕೊಪ್ಪಲಿಗೆ ತೆರಳುತ್ತಿರುವ ವಾಹನಗಳು ರಸ್ತೆ ಮಧ್ಯೆ ಸಿಕ್ಕಿಹಾಕಿಕೊಂಡಿವೆ.
ಜಿಲ್ಲೆಯ ಹಾರಂಗಿ ಜಲಾಶಯದ ನೀರಿನ ಮಟ್ಟ ಇಂದು 2856.73 ಅಡಿ ಇದೆ ಜಲಾಶಯಕ್ಕೆ ಒಳಹರಿವು 13,354 ಕ್ಯುಸೆಕ್ ಇದೆ, ಹೊರಹರಿವು 1500 ಕ್ಯುಸೆಕ್ ನೀರು (ನದಿಗೆ) ಬಿಡಲಾಗಿದೆ. ಕಾಲುವೆಗೆ 125 ಕ್ಯುಸೆಕ್​ ನೀರು ಹರಿಸಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv