ಪ್ರವಾಹದಲ್ಲಿ ಸಿಲುಕಿದ್ದ ಶತಾಯುಷಿ ವೃದ್ಧೆ ರಕ್ಷಣೆ​​​..!

ಕೊಡಗು: ಪ್ರವಾಹದಲ್ಲಿ ಶತಾಯುಷಿ ವೃದ್ಧೆಯೊಬ್ಬರು ಸೇಫ್​​​​ ಆಗಿ ರಕ್ಷಿಸಲಾಗಿದೆ. ಜಿಲ್ಲೆಯ ಮುಕ್ಕೋಡ್ಲು ಗ್ರಾಮದ ಕಾವೇರಮ್ಮ(103) ಎಂಬ ರಕ್ಷಿಸಲ್ಪಟ್ಟ ವೃದ್ಧೆ ಎಂದು ತಿಳಿದುಬಂದಿದೆ. ಕಾವೇರಮ್ಮ ಹಾಗೂ ಅವರ ಮಗ, ಸೊಸೆ ಕಳೆದೊಂದು ವಾರದಿಂದ ಮನೆಯಲ್ಲಿಯೆ ಇದ್ದಾರೆ. ಗುಡ್ಡ ಕುಸಿದ ಪರಿಣಾಮ ನಗರದೆಡೆಗೆ ಬರಲಾರದೆ ಮನೆಯಲ್ಲಿ ಉಳಿದಿದ್ದರು. ಆದರೆ ಇಂದು ಕಾವೇರಮ್ಮನವರನ್ನು ಕುಟುಂಬಸ್ಥರು ಜೆಸಿಬಿ ನೆರವಿನಿಂದ ಮಡಿಕೇರಿಗೆ ಹೊತ್ತು ತಂದಿದ್ದಾರೆ. ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv