ನೂರು ದಿನ ನೂರೊಂದು ಕವನ: ಇದು ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗ

ರಾಯಚೂರು: ನೂರು ದಿನ ನೂರೊಂದು ಕವನಗಳನ್ನು ರಚಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟು ಸಾಹಿತಿ ಪಲಗುಲು ನಾಗರಾಜ ಅವರು ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗ ಮಾಡಿದ್ದಾರೆ.

ಪ್ರಚಲಿತ ವಿಷಯಗಳು, ಕ್ಷೀಪ್ರಗತಿಯಲ್ಲಿ ಜನ ಸಾಮಾನ್ಯರಿಗೆ ತಲುಪಿಸುವ ಆಧುನಿಕ ಯುಗದ ಸಾಮಾಜಿಕ ಜಾಲ ತಾಣಗಳಾದ ವಾಟ್ಸಾಪ್, ಫೇಸ್‌ಬುಕ್‌ ಮತ್ತು ಮೆಸೆಂಜರ್​​​​ಗಳನ್ನು ಸಮರ್ಪಕವಾಗಿ ಬಳಸಿಕೊಂಡು ಈ ಸಾಧನೆ ಮಾಡಿದ್ದಾರೆ. ಸಾಹಿತಿ ಪಲುಗುಲು ನಾಗರಾಜ, ಪ್ರತಿ ದಿನದ ಪ್ರಚಲಿತ ವಿದ್ಯಮಾನಗಳು, ಸಾಮಾಜಿಕ ವಿಷಯಗಳು, ಬುದ್ದ, ಬಸವ, ಅಂಬೇಡ್ಕರ್ ಹೀಗೆ ಮಹನೀಯರ ಕುರಿತು ದಿನಕ್ಕೊಂದು ಕವನಗಳನ್ನು ರಚಿಸಿ ಸೋಷಿಯಲ್ ಮೀಡಿಯಾಗಳ ಮೂಲಕ ಪ್ರತಿ ದಿನ ಸುಮಾರು 5000 ಜನರಿಗೆ ತಲುಪಿಸಿದ್ದಾರೆ. ಇನ್ನು ಮಾನವನ ದೈನಂದಿನ ಬದುಕಿಗೆ ಹತ್ತಿರವಾದ ಹಸಿವು, ನೋವು, ಅಸಹಾಯಕತೆ, ವೈಚಾರಿಕತೆ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ವಿಷಯಗಳನ್ನು ಕವನಗಳ ಮೂಲಕ ಜನ ಸಾಮಾನ್ಯರಿಗೆ ತಲುಪಿರುವುದು ವಿಶೇಷವಾಗಿದೆ. ಇನ್ನು ನೂರು ದಿನ ನೂರೊಂದು ಕವನಗಳನ್ನು ರಚಿಸಿ ಹೊಸ ಪ್ರಯೋಗ ಮಾಡಿರುವ ರಾಯಚೂರಿನ ಸಾಹಿತಿ ಪಲುಗುಲ ನಾಗರಾಜ ಅವರ ಈ ಸಾಧನೆಗೆ ಹಿರಿಯ ಸಾಹಿತಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv