ದೇವಸ್ಥಾನದ ಹುಂಡಿ ಕದ್ದೊಯ್ದ ಕಳ್ಳರು

ಬಾಗಲಕೋಟೆ: ನಿನ್ನೆ ತಡರಾತ್ರಿ ನಗರದ ನವನಗರ 54ನೇ ಸೆಕ್ಟರ್​​​ನಲ್ಲಿ ಕಳ್ಳರು ಸಿದ್ದಿವಿನಾಯಕ ದೇವಸ್ಥಾನದ ಹುಂಡಿ ಕದ್ದೊಯ್ದಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಸಿಪಿಐ ಮಲ್ಲಿಕಾರ್ಜುನ್ ತುಳಸಿಗೇರಿ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಸಂಬಂಧ ನವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv