ನಾವು ಊಟ ಮಾಡಿಯೇ ಬಂದಿದ್ದೇವೆ ಮೋದಿಜೀ

ಪ್ರಧಾನಿ ನರೇಂದ್ರ ಮೋದಿ ಕೇವಲ ದೇಶ ವಿದೇಶಗಳ ನಾಯಕರುಗಳೊಂದಿಗೆ ಮಾತ್ರ ಸಂವಹನ ನಡೆಸುವುದಿಲ್ಲ. ದೇಶದ ಚಿಕ್ಕ ಚಿಕ್ಕ ಮಕ್ಕಳೊಂದಿಗೂ ಪ್ರೀತಿ, ಸಲುಗೆಯಿಂದ ನಡೆದುಕೊಳ್ಳುತ್ತಾರೆ. ಮೊನ್ನೆ ನಡೆದ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಪಬ್​ ಜಿ ಬಗ್ಗೆ ಮಾತನಾಡಿ ಮೋದಿ ಗಮನ ಸೆಳೆದಿದ್ದರು.
ಇದೀಗ ಉತ್ತರ ಪ್ರದೇಶದ ಕಾರ್ಯಕ್ರಮವೊಂದರಲ್ಲಿ ಮಕ್ಕಳ ಜೊತೆ ಚರ್ಚೆ ನಡೆಸುವಾಗ ಶಾಲಾ ಬಾಲಕಿ ದಿಟ್ಟವಾಗಿ ನೀಡಿದ ಉತ್ತರವನ್ನ ಅಷ್ಟೇ ಸ್ಪೋರ್ಟಿವ್ ಆಗಿ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ವಿಡಿಯೋವನ್ನ ಖುದ್ದು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಮೋದಿಯವರೇ ಅಪ್​ಲೋಡ್ ಮಾಡಿದ್ದಾರೆ. ಮಧ್ಯಾಹ್ನದ ಬಿಸಿಯೂಟ ವಿತರಿಸುವ ಅಕ್ಷಯ ಪಾತ್ರೆ ಫೌಂಡೇಷನ್​ 300 ಕೋಟಿ ಊಟ ಸರಬರಾಜು ಮಾಡಿದಕ್ಕಾಗಿ ಉತ್ತರಪ್ರದೇಶದ ವೃಂದಾವನದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅತಿಥಿಯಾಗಿ ಆಗಮಿಸಿದ್ರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೂಡ ಭಾಗಿಯಾಗಿದ್ದರು. ಇದರಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳಿಗೆ ಪ್ರಧಾನಿ ಖುದ್ದು ಊಟ ಬಡಿಸಿದ್ರು. ಅದ್ರೆ, ಮೋದಿ ಕಾರ್ಯಕ್ರಮಕ್ಕೆ ಬರೋದೆ ತಡವಾಗಿತ್ತು. ಅವರು ಬಂದು ಎಲ್ಲರಿಗೂ ಊಟ ಬಡಿಸಿ, ನಂತರ ವಿದ್ಯಾರ್ಥಿಗಳ ಜೊತೆ ಮಾತನಾಡಿದ್ರು. ಈ ವೇಳೆ ಊಟದ ಟೇಬಲ್ ಎದುರು ಕುಳಿತಿದ್ದ ವಿದ್ಯಾರ್ಥಿಯೊಬ್ಬನಿಗೆ, ನಾನು ಬರೋದು ತಡವಾಯ್ತು. ಹೀಗಾಗಿ ನಿಮ್ಮ ಊಟವೂ ತಡವಾಯಿತಲ್ಲ ಅಂತ ಪ್ರಶ್ನಿಸಿದ್ದಾರೆ. ಅದಕ್ಕೆ ಆ ವಿದ್ಯಾರ್ಥಿಯ ಪಕ್ಕದಲ್ಲೇ ಕುಳಿತಿದ್ದ ಮತ್ತೊಬ್ಬ ವಿದ್ಯಾರ್ಥಿನಿ, ನಾವು ಊಟ ಮಾಡಿಕೊಂಡೇ ಬಂದಿದ್ದೆವು ಅಂತ ಮೋದಿಗೆ ಉತ್ತರಿಸಿದ್ದಾಳೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv