ಆಕಾಶವೇ ರಂಧ್ರವಾದಂಥ ದೃಶ್ಯ ಕಂಡು ತಬ್ಬಿಬ್ಬಾದ ಜನ

ಆಕಾಶದಲ್ಲಿ ರಂಧ್ರವಾದ ರೀತಿ ದೃಶ್ಯವೊಂದನ್ನ ಕಂಡು ಯುನೈಟೆಡ್​​ ಅರಬ್​ ಎಮಿರೆಟ್ಸ್​​ ನಿವಾಸಿಗಳು ತಬ್ಬಿಬ್ಬಾಗಿದ್ದಾರೆ. ಕಳೆದ ಭಾನುವಾರ ಅಲ್​ ಏನ್​​​​ನಲ್ಲಿ ಈ ದೃಶ್ಯ ಕಂಡುಬಂದಿದೆ. ಆಕಾಶದಲ್ಲಿ ದೊಡ್ಡ ರಂಧ್ರ ಬಿದ್ದಂತೆ ಕಾಣೋ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಹವಾಮಾನ ತಜ್ಞ ಹಾಗೂ ಖಗೋಳಶಾಸ್ತ್ರಜ್ಞ ಇಬ್ರಾಹಿಂ ಅಲ್​​​ ಜಾರ್ವಾನ್​ ಅನ್ನೋರು ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈ ರಂಧ್ರ ಯುಎಫ್​​ಓ(ಹಾರುವ ತಟ್ಟೆ) ಇರಬಹುದಾ ಅಂತ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಆದ್ರೆ ಈ ವಿಸ್ಮಯಕಾರಿ ರಂಧ್ರದ ಹಿಂದಿನ ರಹಸ್ಯವನ್ನು ತಜ್ಞರು ಬಿಚ್ಚಿಟ್ಟಿದ್ದಾರೆ. ಅವರು ಹೇಳುವ ಪ್ರಕಾರ ಇದನ್ನು ಫಾಲ್​ಸ್ಟ್ರೀಕ್​​​ ಹೋಲ್​ ಎಂದು ಕರೆಯಲಾಗುತ್ತದೆ. ಮೋಡಗಳಲ್ಲಿರುವ ನೀರಿನ ತಾಪಮಾನ ಫ್ರೀಜಿಂಗ್​ ಲೆವೆಲ್​ಗಿಂತ ಕಡಿಮೆ ಇದ್ದಾಗ ಅದು ಐಸ್​ ಆಗಿರುವುದಿಲ್ಲ. ಆಗ ಆ ರೀತಿ ಆಗುತ್ತದೆ. ಫಾಲ್​ಸ್ಟ್ರೀಕ್​​​ ಆಗೋದು ತುಂಬಾನೆ ಅಪರೂಪ. ಇವು ಸುಮಾರು 50 ಕಿ.ಮೀವರೆಗೆ ಚಾಚಬಹುದು. ಹೀಗಾಗಿ ಜನ ಸಾಮಾನ್ಯವಾಗಿ ಇವನ್ನ ಹಾರುವ ತಟ್ಟೆ ಎಂದು ತಪ್ಪು ತಿಳಿಯುತ್ತಾರೆ ಎಂದು ಹೇಳಿದ್ದಾರೆ.