ಹುಬ್ಬಳ್ಳಿ ಬಾರ್​​​ನಲ್ಲಿ ಮದ್ಯಪ್ರಿಯರಿಗೆ ಬಂಪರ್ ಆಫರ್, ಮತ ಹಾಕಿದ್ರೆ ಶೇ.3ರಷ್ಟು ಡಿಸ್ಕೌಂಟ್..!

ಹುಬ್ಬಳ್ಳಿ: ಜಿಲ್ಲೆಗಳಲ್ಲಿ ಹೇಗಾದರೂ ಮಾಡಿ ಈ ಬಾರಿ‌ ಮತದಾನ ಪ್ರಮಾಣ ಹೆಚ್ಚಿಸಲೇಬೇಕೆಂದು ಧಾರವಾಡ ಜಿಲ್ಲಾಡಳಿತ ವಿಭಿನ್ನ ಪ್ರಯತ್ನ ಮಾಡುತ್ತಿದೆ. ಹತ್ತು ಹಲವು ಕಾರ್ಯಕ್ರಮ ಮಾಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾಡಳಿತ ಈ ಪ್ರಯತ್ನಕ್ಕೆ ಬಾರ್ ಮಾಲೀಕರೊಬ್ಬರು ಕೈಜೋಡಿಸಿ ಮತದಾನ ಪ್ರಮಾಣ ಹೆಚ್ಚಿಸಲು ವಿನೂತನ ಪ್ರಯತ್ನ ಮಾಡುತ್ತಿದ್ದಾರೆ.

 

ನಗರದ ಕೋರ್ಟ್ ವೃತದ ಬಳಿ ಇರುವ ವೈನ್ ಸ್ಟೊರ್ ಒಂದರ ಮಾಲೀಕರಾದ ವಿನಾಯಕ ಆಕಳವಾಡಿಯವರು ಜಿಲ್ಲಾಡಳಿಕ್ಕೆ ಸಾಥ್ ನೀಡುವ ಮೂಲಕ ಮದ್ಯ ಪ್ರಿಯರನ್ನು ಮತದಾನದಲ್ಲಿ ಭಾಗವಹಿಸುವಂತೆ ಮಾಡಲು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಮತದಾನ ಮಾಡಿ ಬಂದ, ಮದ್ಯ ಪ್ರಿಯರಿಗೆ ಬಂಪರ್ ಆಫರ್ ನೀಡುತ್ತಿದ್ದಾರೆ. ನಾಳೆ ನಡೆಯಲಿರುವ ಲೋಕಸಭಾ ಚುನಾವಣೆಗೆ ಮತದಾನ ಮಾಡಿದ ಶಾಹಿ ಗುರುತು ತೋರಿಸಿದರೆ ಶೇ 3ರಷ್ಟು ಡಿಸ್ಕೌಂಟ್ ಕೂಡ ನೀಡಲಾಗುತ್ತದೆ. ಮತದಾನದ ಮರುದಿನದವರೆಗೂ ಇದು ಲಭ್ಯವಿರುತ್ತದೆ ಎಂದು ಅವರು ಹೇಳಿದ್ದಾರೆ. ರಾಜಕೀಯ ಪಕ್ಷಗಳು ನೀಡುವ ಮದ್ಯದ ಆಮಿಷಕ್ಕೆ ಬಲಿಯಾಗಿ ಮತವನ್ನು ಮಾರಿಕೊಳ್ಳಬಾರದು ಮದ್ಯ ಪ್ರೀಯರು ಪ್ರಾಮಾಣಿಕವಾಗಿ ತಮ್ಮ ಹಕ್ಕನ್ನು ಚಲಾಯಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ಈ ಮತದಾನದ ಅಭಿಯಾನ ಜಾರಿ ಮಾಡಲಾಗಿದೆ ಎಂದು ವೈನ್ ಸ್ಟೋರ ಮಾಲೀಕರು ಹೇಳಿದ್ದಾರೆ.

ಒಟ್ಟಿನಲ್ಲಿ, ಇದೇನೆ ಇದ್ದರೂ ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಅನ್ನೋದನ್ನು ಮದ್ಯಪ್ರಿಯರೂ ನೆನಪಿಟ್ಟುಕೊಳ್ಳಬೇಕು.

 

 


Follow us on:

 

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv