ಮಟ್ಕಾ, ಜೂಜಾಡ್ತಿದ್ದವನ ಬಂಧನ

ಹುಬ್ಬಳ್ಳಿ: ಮಟ್ಕಾ, ಜೂಜಾಟ ಆಡಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಸಿಸಿಬಿ ಪೊಲೀಸರ ಯಶ್ವಸ್ವಿಯಾಗಿದೆ. ಗುರುಸಿದ್ದಪ್ಪಾ ನಿಂಗಪ್ಪ ಬಾನಿ ಬಂಧಿತ ಆರೋಪಿ. ಮುಂಬೈ ಪೇಟೆ ಮಾರುಕಟ್ಟೆಯ ಅಂಕಿ ಅಂಶಗಳ ಆಧಾರದ ಮೇರೆಗೆ ಮಟ್ಕಾ, ಜೂಜಾಟ ಆಡಿಸುತ್ತಿದ್ದ. ಬಂಧಿತನಿಂದ 4,800 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ‌ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.