ಆಭರಣ, ಹಣದ ಬ್ಯಾಗ್ ಪತ್ತೆ ಹಚ್ಚಿ, ಪ್ರಾಮಾಣಿಕತೆ ಮೆರೆದ ಚಾಲಕ ನೇತಾಜಿ..!

ಹುಬ್ಬಳ್ಳಿ: ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಬೆಲೆಬಾಳುವ ಆಭರಣಗಳ ಬ್ಯಾಗ್‌ನ್ನು ಖಾಸಗಿ ಬಸ್ ಚಾಲಕ ಪತ್ತೆ ಹಚ್ಚಿ, ವಾಪಸ್ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ನೇತಾಜಿ ಪ್ರಾಮಾಣಿಕತೆ ಮೆರೆದ ಬಸ್ ಚಾಲಕ. ಬೆಂಗಳೂರಿನಿಂದ ಬೈಲಹೊಂಗಲಕ್ಕೆ ಖಾಸಗಿ ಬಸ್ ಪ್ರಯಾಣಿಸುತ್ತಿತ್ತು. ಈ ವೇಳೆ ಹುಬ್ಬಳ್ಳಿಯಲ್ಲಿ ಬೇರೆಯವರ ಲಗೇಜ್‌ನೊಂದಿಗೆ ಪ್ರಯಾಣಿಕರೊಬ್ಬರ ಬ್ಯಾಗ್ ಮಿಸ್ ಆಗಿತ್ತು. ಬ್ಯಾಗ್‌ನಲ್ಲಿ ಬೆಲೆಬಾಳುವ ಬಂಗಾರದ ಆಭರಣಗಳು ಮತ್ತು ಹಣ ಇದ್ದವು. ಬೈಲಹೊಂಗಲದಲ್ಲಿ ಬ್ಯಾಗ್ ಕಳೆದುಕೊಂಡ ಪ್ರಯಾಣಿಕರೊಬ್ಬರು ಇಳಿದು ನೋಡಿದಾಗ ಬೆಳಕಿಗೆ ಬಂದಿದೆ. ಕೂಡಲೇ ಎಚ್ಚೆತ್ತ ಬಸ್ ಚಾಲಕ ಬ್ಯಾಗ್ ಪತ್ತೆ ಹಚ್ಚಿ ವಾಪಸ್ ತಲುಪಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಬ್ಯಾಗ್ ಅನ್ನು ಪ್ರಯಾಣಿಕರಿಗೆ ಹಸ್ತಾಂತರ ಮಾಡಿದರು. ಇನ್ನೂ ಖಾಸಗಿ ಬಸ್ ಚಾಲಕನ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv