UPSCಯಲ್ಲಿ 17ನೇ ಱಂಕ್ ಪಡೆದ ಹುಬ್ಬಳ್ಳಿ ಹೈದನ ಮನದ ಮಾತು

ಹುಬ್ಬಳ್ಳಿ: ಯುಪಿಎಸ್‌ಸಿ ತುಂಬಾ ತುಂಬಾ ಕಬ್ಬಿಣದ ಕಡಲೆ ಎನ್ನುವ ಮಾತಿದೆ. ಆದ್ರೆ ರಾಜ್ಯದ ಯುವಜನತೆ 2018 ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯದ ಹಲವು ಯುವಕರು ಕಷ್ಟಪಟ್ಟು ಓದಿ ಱಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಹುಬ್ಬಳ್ಳಿಯ ಯುವಕ ರಾಹುಲ್ ಸಂಕನೂರು ಯುಪಿಎಸ್‌ಸಿ ಱಂಕಿಂಗ್ ಪಟ್ಟಿಯಲ್ಲಿ ದೇಶಕ್ಕೆ 17ನೇ ಱಂಕ್ ಪಡೆದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಯುಪಿಎಸ್‌ಸಿ ಫಲಿತಾಂಶ ಬಿಡುಗಡೆಯಾಗುತ್ತಿದ್ದಂತೆ ಅವರ ಮನೆಯಲ್ಲಿ ಅತೀವ ಸಂಭ್ರಮ ಮನೆ ಮಾಡಿದೆ. ಅವರ ಕುಟುಂಬಸ್ಥರು ಹಾಗೂ ಹಿತೈಷಿಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದೇ ವೇಳೆ, ರಾಹುಲ್ ಸಂಕನೂರು ‘ಫಸ್ಟ್ ನ್ಯೂಸ್’ ಜೊತೆ‌ ಮಾತನಾಡಿ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ.

 


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv