ವಾಹನ ಅಡ್ಡ ಹಾಕಿ ಸುಲಿಗೆ ಮಾಡುತ್ತಿದ್ದೋರು ಖಾಕಿ ಖೆಡ್ಡಾಗೆ

ಹುಬ್ಬಳ್ಳಿ: ವಾಹನ ನಿಲ್ಲಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರನ್ನ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ. ಭರತ ಗೋಕಾಕ, ಯಲ್ಲಪ್ಪ ಅಭಿಗೇರ ಬಂಧಿತ ಆರೋಪಿಗಳು. ಅಕ್ಟೋಬರ್ 28 ರಂದು ಹುಬ್ಬಳ್ಳಿಯ ಪಿ ಬಿ ರಸ್ತೆಯ ರಿಲಯನ್ಸ್ ಜಿ ಎಂ ಪೆಟ್ರೋಲ್ ಮುಂದೆ ಲಾರಿ ತಡೆದು ಚಾಲಕನಿಂದ 1,17,400 ರೂಪಾಯಿ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಲಾರಿ ಚಾಲಕ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಬೆಂಡಿಗೇರಿ ಠಾಣೆಯ ಇನ್ಸ್‌ಪೆಕ್ಟರ್‌ ಡಿ. ಸಂತೋಶ ಕುಮಾರ, ಪಿಎಸ್ ಐ ಆರ್ ಕಿತ್ತೂರ ನೇತೃತ್ವದಲ್ಲಿ ಆರೋಪಿಗಳನ್ನ ಬಂಧಿಸಲಾಗಿದೆ. ಇನ್ನೂ ಬಂಧಿತರಿಂದ 52,000 ಸಾವಿರ ಹಣ ವಶಕ್ಕೆ ಪಡೆಯಲಾಗಿದೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ:contact@firstnews.tv