KUDಗೆ ಬಂದಿಳಿದ ಯುದ್ಧ ವಿಮಾನ.. ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಜನ!

ಧಾರವಾಡ: ಕಳೆದ ಕೆಲವು ದಿನಗಳಿಂದ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಿದೆ. ನಿನ್ನೆಯಷ್ಟೇ ವಿಂಗ್ ಕಮಾಂಡರ್ ಅಭಿನಂದನ್​ ಅವರನ್ನ ಪಾಕಿಸ್ತಾನ ಬಿಡುಗಡೆಗೊಳಿಸಿದ್ದಕ್ಕೆ ದೇಶ ಸಂಭ್ರಮದಲ್ಲಿ ತೇಲಾಡುತ್ತಿದೆ. ಎಲ್ಲೆಡೆ ದೇಶದಲ್ಲಿ ದೇಶಾಭಿಮಾನದ ಸಂಭ್ರಮ ಮನೆ ಮಾಡಿದೆ. ಈ ನಡುವೆ ಯುದ್ಧ ವಿಮಾನವೊಂದು ನೇರವಾಗಿ ಧಾರವಾಡಕ್ಕೆ ಬಂದಿಳಿದಿದೆ.

ಕಳೆದ ಎರಡು ದಿನಗಳಿಂದ ಹೆಚ್.ಪಿ.ಟಿ 32 ದೀಪಕ್ ಹೆಸರಿನ ಯುದ್ಧ ವಿಮಾನ ಕೆಯುಡಿ ವಿಜ್ಞಾನ ಕೇಂದ್ರದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಬೆಂಗಳೂರಿನ ಹೆಚ್‌ಎಎಲ್‌ನಲ್ಲಿ 1977 ರಲ್ಲಿ ನಿರ್ಮಾಣ ಆಗಿರುವ ಈ ವಿಮಾನ, ಅಮೆರಿಕಾ ಯುದ್ಧ ವಿಮಾನದ ಮಾದರಿಯಲ್ಲಿ ತಯಾರಿಸಲಾಗಿದೆ‌. ಇದು ಹಳೆಯದಾಗಿರೋದ್ರಿಂದ ಕೆಯುಡಿ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇನ್ನು ಈ ವಿಮಾನವನ್ನ ನೋಡೋದಕ್ಕೆ ವಿದ್ಯಾರ್ಥಿಗಳು, ಪ್ರವಾಸಿಗರು ತಂಡೋಪತಂಡವಾಗಿ ಬರ್ತಿದ್ದಾರೆ‌. ವಿಮಾನದ ಮುಂದೆ ಸೆಲ್ಫಿ ತೆಗೆದುಕೊಂಡು ಖುಷಿ ಪಡುತ್ತಿದ್ದಾರೆ. ಜೊತೆಗೆ ಪೈಲಟ್ ಸೀಟ್‌ನಲ್ಲಿ ಕುಳಿತು ಸಂಭ್ರಮಿಸಿದ್ದಾರೆ. ಕೇವಲ ಫೋಟೋಗಳಲ್ಲಿ ವಿಡಿಯೋಗಳಲ್ಲಿ ನೋಡ್ತಿದ್ದ ಯುದ್ಧ ವಿಮಾನ, ಈಗ ವಾಸ್ತವವಾಗಿ ತಮ್ಮ ಕಣ್ಣೇದುರಿಗೇ ಕಾಣಿಸುತ್ತಿರುವುದರಿಂದ ಜನರ ಸಂತೋಷಕ್ಕೆ ಪಾರವೇ ಇಲ್ಲ ಎಂಬತಿದೆ.


Follow us on:

YouTube: firstNewsKannada Instagram: firstnews.tv Facebook: firstnews.tv Twitter: firstnews.tv