ಇಂಟರ್ನೆಟ್​ ಇಲ್ಲದೇ ಇನ್ಮುಂದೆ ಗೂಗಲ್​​ನಲ್ಲಿ ಮಾಹಿತಿ ಬ್ರೌಸ್​ ಮಾಡ್ಬಹುದು..!

ಇಂಟರ್​​ನೆಟ್ ಬಳಸುವವರಲ್ಲಿ ಗೂಗಲ್ ಕ್ರೋಮ್​​.. ಬಳಕೆ ಮಾಡದ, ಗೊತ್ತಿರದ ಜನರೇ ಇಲ್ಲ. ಆನ್​​ಲೈನ್​​ನ ಪ್ರತಿಯೊಂದು ಕೆಲಸಕ್ಕೂ ಕ್ರೋಮ್​ ಅನ್ನೋ ಬ್ರೌಸರ್ ಬೇಕೇಬೇಕು. ಇದನ್ನ ಬಳಸ್ಬೇಕು ಅಂದ್ರೆ ಇಂಟರ್ನೆಟ್​ ಬೇಕು. ಇನ್ಮುಂದೆ ಇಂಟರ್ನೆಟ್​ ಇಲ್ಲದೆಯೂ ಕ್ರೋಮ್​​ನಲ್ಲಿ ನಿಮಗೆ ಬೇಕಾದ ಮಾಹಿತಿಗಳನ್ನ ಬ್ರೌಸ್​ ಮಾಡಬಹುದು. ಆದ್ರೆ ಆ್ಯಂಡ್ರಾಯ್ಡ್​​ನಲ್ಲಿ ಕ್ರೋಮ್ ಬಳಕೆ ಮಾಡಿಕೊಳ್ಳೋರಿಗೆ ಮಾತ್ರ ಇದರ ಉಪಯೋಗ ಆಗಲಿದೆ.

ಹೌದು, ಮೊಬೈಲ್​​ನಲ್ಲಿ ಇಂಟರ್ನೆಟ್ ಇಲ್ಲದೆಯೂ ಬ್ರೌಸ್ ಮಾಡುವ ಅವಕಾಶವನ್ನ ಗೂಗಲ್ ಸಂಸ್ಥೆ ಮಾಡಿಕೊಡ್ತಿದೆ. ತನ್ನ ಸರ್ಚ್​​ ಐಕಾನ್ ಕ್ರೋಮ್​​ನಲ್ಲಿ ಸಾಕಷ್ಟು ಬದಲಾವಣೆಗಳನ್ನ ಮಾಡಿದೆ. ‘ಡೇಟಾ ಸೇವರ್’ ಅನ್ನೋ ಹೊಸ ಫೀಚರ್ ಪರಿಚಯ ಮಾಡಿದೆ.

ನೆಟ್​​ ​ಇಲ್ಲದೇಯೂ ಹೇಗೆ ಬಳಸ್ಬಹುದು..?

  • ಆ್ಯಂಡ್ರಾಯ್ಡ್​​​ ಸ್ಮಾರ್ಟ್​ ಫೋನಿನಲ್ಲಿ ಕ್ರೋಮ್​ ಅಪ್​ಡೇಟ್​​ ಮಾಡಿಕೊಳ್ಳಬೇಕು
  • ಅಪ್​​​ಡೇಟ್​ ಮಾಡಿದಾಗ ಹೊಸ ಫೀಚರ್ ಕ್ರೋಮ್​ನಲ್ಲಿ ಬಂದು ಸೇರಿಕೊಳ್ಳಲಿದೆ
  • ನಮಗೆ ಇಷ್ಟವಾದ ಪಾಡ್ಸ್​ಗಳನ್ನ ಕ್ರೋಮ್​ನಲ್ಲಿ ಬ್ರೌಸ್ ಮಾಡಿಕೊಳ್ಳುವುದು
  • ಇಂಟರ್ನೆಟ್ ಇರುವ ಸಂದರ್ಭದಲ್ಲಿ ಡೌನ್​​ಲೋಡ್​ ಮಾಡಿಕೊಳ್ಳಬೇಕು
  • ಅಲ್ಲದೇ ಸ್ಮಾರ್ಟ್ ಫೋನ್ ವೈ-ಫೈಗೆ ಕನೆಕ್ಟ್ ಆದ ವೇಳೆ ಡೇಟಾ ಸೇವರ್​ನಿಂದ ಮಾಹಿತಿ ಸಂಗ್ರಹ
  • ಮೊಬೈಲ್ ಲೋಕೇಷನ್ ಸುತ್ತಮುತ್ತಲಿನ ಪ್ರಮುಖ ವಿಷಯಗಳ ಬಗ್ಗೆ ಸಂಗ್ರಹ
  • ಬ್ರೌಸಿಂಗ್ ಮಾಡುವವರ ಹವ್ಯಾಸಗಳ ಆಧಾರ ಮೇಲೆ ಡೌನ್​ಲೋಡ್
  • ನೆಟ್ ಇಲ್ಲದೇ ಇದ್ದಾಗ ಅದನ್ನು ನಾವು ಸುಲಭವಾಗಿ ಬಳಕೆಗೆ ಮಾಡಬಹುದು
  • ಶೇಕಡಾ 70 ರಷ್ಟು ಡೇಟಾವನ್ನ ಉಳಿಸಲಿದೆ ಹೊಸ ‘ಡೇಟಾ ಸೇವರ್’

ಆಟೋ ಡೌನ್​ಲೋಡ್​ ಸೌಲಭ್ಯ

ಆಫ್​​ಲೈನ್​​ನಲ್ಲಿ ಬ್ರೌಸ್ ಮಾಡುವ ಡೇಟಾವನ್ನು ಕ್ರೊಮ್ ತಾನೇ ಡೌನ್ ಲೋಡ್ ಮಾಡಿಕೊಳ್ಳಲಿದೆ. ಎಲ್ಲವೂ ಕೂಡ ಆಟೋ ಡೌನ್ ಲೋಡ್ ಆಗೋದ್ರಿಂದ ಹೆಚ್ಚಿನ ಅನುಕೂಲ ಆಗಲಿದೆ. ಭಾರತದಂತಹ ದೇಶಗಳಲ್ಲಿ ಈ ಸೌಲಭ್ಯ ಮತ್ತಷ್ಟು ಲಾಭ ಆಗಲಿದೆ. ಯಾಕಂದ್ರೆ ದೇಶದ ಎಲ್ಲಾ ಸ್ಥಳಗಳಲ್ಲಿಯೂ ಇಂಟರ್ನೆಟ್​ ಸೇವೆ ಇರಲ್ಲ. ಹೀಗಾಗಿ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇದು ಪ್ಲಸ್​ ಪಾಯಿಂಟ್​ ಆಗಲಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv