ನೈಸರ್ಗಿಕವಾಗಿ ಮುಖ ಕಾಂತಿಯುತವಾಗಬೇಕಾ?

ಬಿಸಿಲು, ಮಳೆ, ಚಳಿಗಾಲಗಳಿಗೆ ತಕ್ಕಂತೆ ಮುಖದ ಕಾಂತಿ ಕಾಪಾಡಿಕೊಳ್ಳೋದು ಹದಿಹರೆಯದವರಿಗೆ ಚಾಲೆಂಜ್. ಹಾಗಂತ ಬರೀ ಕೆಮಿಕಲ್ ಕ್ರೀಮ್‌ಗಳ ಮೊರೆ ಹೋಗೋದ್ರ ಬದಲು ಮನೆಯಲ್ಲೇ ಸಿಗೋ ನ್ಯಾಚುರಲ್ ವಸ್ತುಗಳಿಂದ ಮುಖದ ಅಂದ ಹೆಚ್ಚಿಸಿಕೊಳ್ಳಬಹುದು. ಮುಖದ ಕಾಂತಿ ಹೆಚ್ಚಿಸಿಕೊಳ್ಳೋಕೆ ಇಲ್ಲಿದೆ ಸಿಂಪಲ್ ದಾರಿಗಳು:

1. ಹಾಲು- ಹಾಲಿಗೆ ನೈಸರ್ಗಿಕವಾಗಿ ಬ್ಲೀಚ್‌ ಮಾಡೋ ಗುಣವಿದೆ. ಸ್ವಲ್ಪ ಹಾಲಿಗೆ 3-4 ಹನಿ ನಿಂಬೆರಸ , 1 ಟೇಬಲ್‌ಸ್ಪೂನ್ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿ 20 ನಿಮಿಷಗಳ ಬಳಿಕ ತೊಳೆಯಿರಿ. ಹೀಗೆ ಪ್ರತಿದಿನ ಮಾಡೋದ್ರಿಂದ 1 ವಾರದೊಳಗಾಗಿ ರಿಸಲ್ಟ್ ನಿಮಗೇ ಗೊತ್ತಾಗುತ್ತೆ.

2. ಸಿಹಿಕುಂಬಳಕಾಯಿ – ಕುಂಬಳಕಾಯಿ ಆಂಟಿ ಆಕ್ಸಿಡೆಂಟ್‌ಗಳ ಆಗರ. ತ್ವಚೆಯ ಸೌಂದರ್ಯಕ್ಕೆ ಹೇಳಿ ಮಾಡಿಸಿದ್ದು. ಇದರಲ್ಲಿ ಬೀಟಾ ಕ್ಯಾರಟಿನ್, ವಿಟಮಿನ್-ಸಿ ಹಾಗೂ ಎ ಇರುತ್ತೆ. ಕುಂಬಳಕಾಯಿ ತಿರುಳನ್ನ ತೆಗೆದು ಮಿಕ್ಸಿಯಲ್ಲಿ ರುಬ್ಬಿ. ಈ ಮಿಶ್ರಣಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ.

3. ಅಕ್ಕಿಹಿಟ್ಟು- ಸ್ವಲ್ಪ ಅಕ್ಕಿಹಿಟ್ಟಿಗೆ ಹಾಲು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಮುಖಕ್ಕೆ ಹಚ್ಚಿ 10 ನಿಮಿಷದ ನಂತ್ರ ವೃತ್ತಾಕಾರವಾಗಿ ಮಸಾಜ್ ಮಾಡಿ. ಇದ್ರಿಂದ ಡೆಡ್ ಸ್ಕಿನ್ ಹೋಗಿ ಮುಖ ಕಾಂತಿಯುಕ್ತವಾಗುತ್ತದೆ. ಅಕ್ಕಿಹಿಟ್ಟು ನ್ಯಾಚುರಲ್ ಸ್ಕ್ರಬ್ ಆಗಿ ಕೆಲಸ ಮಾಡುತ್ತೆ.

4. ನಿಂಬೆಹಣ್ಣು- ನಿಂಬೆಹಣ್ಣಿನಲ್ಲಿ ಬ್ಲೀಚಿಂಗ್ ಗುಣ ಇರೋದ್ರಿಂದ ನಿಂಬೆರಸ ಅಥವಾ ನಿಂಬೆಹೋಳನ್ನೇ ಮುಖಕ್ಕೆ ನೇರವಾಗಿ ಮಸಾಜ್ ಮಾಡಿದ್ರೆ ಸ್ಕಿನ್ ಲೈಟ್ ಆಗುತ್ತಾ ಹೋಗುತ್ತದೆ.

5. ಜೇನುತುಪ್ಪ ಮತ್ತು ಕಾಫಿ ಮಾಸ್ಕ್ ಮುಖದ ಕಾಂತಿಗೆ ಅದ್ಭುತ ಫಲಿತಾಂಶ ನೀಡುತ್ತದೆ. ಕಾಫಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಗುಣಗಳು ಇದ್ದರೆ ಜೇನುತುಪ್ಪದಲ್ಲಿ ಮಾಯಿಶ್ಚರೈಸಿಂಗ್​​ ಗುಣಗಳು ಇವೆ. ಇದು ಚರ್ಮಕ್ಕೆ ತಕ್ಷಣ ಮತ್ತು ದೀರ್ಘ ಕಾಲದ ಕಾಂತಿ ನೀಡುತ್ತದೆ.

6. ಕ್ಲೆನ್ಸಿಂಗ್: ಯಾವುದೇ ಕಾರಣಕ್ಕೂ ಮಲಗೋ ಮುನ್ನ ಮುಖದಲ್ಲಿರುವ ಮೇಕಪ್‌ ಹಾಗೇ ಬಿಡಬೇಡಿ. ಪ್ರತಿದಿನ ಮಲಗೋ ಮುನ್ನ ಹಾಲಿನಿಂದ ಕ್ಲೆನ್ಸಿಂಗ್ ಮಾಡಿದರೆ ಮುಖದ ಕಾಂತಿ ಹೆಚ್ಚುವುದು.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv