ಮಕ್ಕಳ ಡಿಪ್ರೆಷನ್​​ಗೆ ಬ್ರೇಕ್​ ಹಾಕಲು ಇಲ್ಲಿದೆ ಸರಳ ಉಪಾಯ..!

ಮಕ್ಕಳ ವರ್ತನೆ ಕೆಲವೊಮ್ಮೆ ಪೋಷಕರಿಗೆ ಕಿರಿ ಕಿರಿ ಉಂಟು ಮಾಡುತ್ತದೆ. ಅತಿಯಾದ ಸಿಡುಕು, ಕೋಪ, ಹಠಮಾರಿತನ, ಬೇಕು ಅಂದ್ರೆ ಬೇಕೇಬೇಕು. ಪಬ್ಲಿಕ್‌ನಲ್ಲಿ ಅಳೋದು, ಬಟ್ಟೆಗಳನ್ನು ಗಲೀಜು ಮಾಡಿಕೊಳ್ಳೋದು, ನೆಲದ ಮೇಲೆ ಕೂತು ಅಳೋದು, ಸುತ್ತ ಮುತ್ತ ಕೈಗೆ ಸಿಗುವಂತಹ ವಸ್ತುಗಳ ಮೇಲೆ ತಮ್ಮ ಸಿಟ್ಟನ್ನ ತೋರಿಸೋದು. ಹೀಗೆ ಒಂದೋ ಎರಡೋ.. ಇಂಥ ಮಕ್ಕಳ ವರ್ತನೆ ಪೋಷಕರಿಗೆ ಡಿಸ್ಟರ್ಬ್ ಮಾಡುತ್ತದೆ. ಮಕ್ಕಳನ್ನು ಹ್ಯಾಂಡಲ್ ಮಾಡೋದು ಪೋಷಕರಿಗೆ ದೊಡ್ಡ ಸವಾಲ್ ಇದ್ದಂತೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಹತೋಟಿಗೆ ತರಲು ಟಿಪ್ಸ್ ಇಲ್ಲಿವೆ.

1. ಮಕ್ಕಳ ಗಮನದ ಬಗ್ಗೆ ಕೇರ್ ವಹಿಸಿ
ಮಕ್ಕಳನ್ನು ನಿಭಾಯಿಸುವುದು ಅಷ್ಟು ಸುಲಭದ ಮಾತಲ್ಲ. ಅಳುವ ಮಕ್ಕಳನ್ನು ಹ್ಯಾಂಡಲ್ ಮಾಡಲು ಅವರ ಗಮನ ಬೇರೆಡೆಗೆ ಸೆಳೆಯುವುದು. ನಿಮ್ಮ ಮಗು ಹಠ ಮಾಡಿ, ಅಳುತ್ತಿದ್ದರೆ ಅವರ ಗಮನವನ್ನು ಬೇರೆಡೆಗೆ ಕೇಂದ್ರಿಕರಿಸಿ. ನಿಮ್ಮ ಮಗುವಿಗೆ ಫೇವರಿಟ್ ಫುಡ್ ಹಾಗೂ ಆಟದ ವಸ್ತುಗಳನ್ನು ನೀಡಿ ಸಮಾಧಾನ ಪಡಿಸಬಹುದು.

2. ಅರ್ಥಮಾಡಿಕೊಳ್ಳಿ: ಪ್ರತಿ ಬಾರಿ ನಿಮ್ಮ ಮಗು ಹಠ ಮಾಡಿ ಅಳುತ್ತಿದ್ದರೆ ಮೊದಲು ನಿಮ್ಮ ಮಗು ಏನು ಹೇಳುತ್ತಿದೆ ಎಂಬುದನ್ನ ತಿಳಿದುಕೊಳ್ಳಿ. ಮಗು ಯಾಕೆ ಹಠ ಮಾಡೋದಕ್ಕೆ ಕಾರಣ ತಿಳಿದುಕೊಂಡು ಅದಕ್ಕೆ ಸಲ್ಯೂಷನ್ ಹುಡುಕುವುದು ಉತ್ತಮ. ಇದರಿಂದ ಮಗುವಿನ ಹಠ ಕಡಿಮೆ ಮಾಡಲು ಸಹಾಯಕಾರಿ.

3. ಸುಳ್ಳು ಆಸ್ವಾಸನೆ ಕೊಡಬೇಡಿ.. ಮಕ್ಕಳಿಗೆ ಯಾವುದಾದರೂ ಆಟದ ವಸ್ತು, ತಿಂಡಿ ಕೊಡಿಸುವಂತೆ ಕೇಳಿದರೆ, ಅದನ್ನ ಕೊಡಿಸಲು ನಿರ್ಲಕ್ಷ್ಯ ಮಾಡಬೇಡಿ. ಇದು ಸರಿಯಿಲ್ಲ ಅಂತಾ ಮಕ್ಕಳ ಮುಂದೆ ಹೇಳಬೇಡಿ. ಮೊದಲಿಗೆ ಯಾವ ವಸ್ತು ಕೊಡಿಸಬೇಕು, ಯಾವುದನ್ನು ಕೊಡಿಸಬಾರದು ಸ್ಪಷ್ಟವಾಗಿ ತಿಳಿದುಕೊಳ್ಳಿ. ಅನುಚಿತ ಬೇಡಿಕೆಗಳನ್ನು ಮಕ್ಕಳು ಒಡ್ಡುತ್ತಿದ್ದರೆ ಧೃಡವಾಗಿ ನಿರಾಕರಿಸಿ. ಆದ್ರೆ ತಾಳ್ಮೆ ಕಳೆದುಕೊಂಡು ಬೈದು, ಹೊಡೆದರೆ ಮಕ್ಕಳ ಹಠ ಇನ್ನೂ ಜೋರಾಗಬಹುದು. ಅಲ್ಲದೇ ಮಾನಸಿಕವಾಗಿಯೂ ಕುಗ್ಗಬಹುದು.

4. ಹೂಗಳಿಕೆ, ಪ್ರೋತ್ಸಾಹವಿರಲಿ: ಮಕ್ಕಳು ಒಳ್ಳೆಯ ನಡತೆ ಪ್ರದರ್ಶಿಸಿದರೆ, ಹೊಗಳಿಕೆ , ಬಹುಮಾನ ನೀಡಿ ಪ್ರೋತ್ಸಾಹಿಸಿ. ಮಕ್ಕಳನ್ನು ಪ್ರತಿ ಬಾರಿ ನಿಂದಿಸದಿರಿ. ಸಾಧ್ಯವಾದಷ್ಟು ಸಮಾಧಾನದಿಂದಿರಿ. ಮಕ್ಕಳನ್ನು ಕೋಪದಿಂದ ನೋಡಿದಷ್ಟು ಅವು ನಮ್ಮನ್ನು ಕೆಟ್ಟವರೆಂದು ಭಾವಿಸಲು ಆರಂಭಿಸುತ್ತವೆ. ಟಿವಿ. ಮೊಬೈಲ್ ಗಳಲ್ಲಿ ಹೆಚ್ಚು ಸಮಯ ಕಳೆಯುವ ಬದಲು ಮಕ್ಕಳ ಜತೆ ಹೆಚ್ಚು ಸಮಯ ಕಳೆಯಿರಿ. ಇದರಿಂದ ಮಕ್ಕಳ ಹಾಗೂ ನಿಮ್ಮ ನಡುವಿನ ಬಾಂಧವ್ಯ ಹೆಚ್ಚಾಗುತ್ತದೆ. ಮಕ್ಕಳು ನಿಮ್ಮ ಮಾತನ್ನು ನಿಧಾನಗತಿಯಲ್ಲಿ ಕೇಳಲು ಆರಂಭಿಸುತ್ತವೆ.

5. ಮಕ್ಕಳಲ್ಲಿ ಅತಿ ಶಿಸ್ತು ನಿರೀಕ್ಷಿಸಬೇಡಿ. ಮಕ್ಕಳಲ್ಲಿ ಅತಿಯಾದ ಶಿಸ್ತು ಅಪೇಕ್ಷಿಸುತ್ತ ಹೋದರೆ, ಅವರ ನಡುವಳಿಕೆಯಲ್ಲಿ ನಿಯಂತ್ರಣ ತಪ್ಪಬಹುದು. ಖಿನ್ನತೆ, ಡಿಪ್ರೆಷನ್‌ನಿಂದ ಮಕ್ಕಳು ನಿಮ್ಮ ಮಾತಿನ ವಿರುದ್ಧವಾಗಿ ನಡೆದುಕೊಳ್ಳಬಹುದು.  ಕೆಲವೊಮ್ಮೆ ಅನೇಕ ಪೋಷಕರು ತಮ್ಮ ಮಕ್ಕಳು ಪ್ರಶ್ನೆ ಕೇಳಿದ್ರೆ ನಿರ್ಲಕ್ಷ್ಯ ವಹಿಸುತ್ತಾರೆ. ಪ್ರಶ್ನೆ ಕೇಳಿದ್ರೆ ಉತ್ತರಿಸಿ, ಇದರಿಂದ ಮಕ್ಕಳ ಹಠ ಕಡಿಮೆಯಾಗುತ್ತದೆ. ಪ್ರೀತಿಯಿಂದ, ತಾಳ್ಮೆಯಿಂದ ಮಕ್ಕಳ ಪ್ರಶ್ನೆಗಳಿಗೆ ಪೋಷಕರು ಉತ್ತರ ನೀಡುವುದು ಉತ್ತಮ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv