Just 3 ತಿಂಗಳಲ್ಲಿ 21 ಕೆಜಿ ತೂಕ ಇಳಿಸಿದ ಯುವಕ..!

ಎಲ್ಲರಿಗೂ ತೂಕ ಇಳಿಸಿಕೊಳ್ಳಬೇಕು.. ಸ್ಲಿಮ್ ಆಗಿ ಕಾಣಿಸಿಕೊಳ್ಳಬೇಕು ಅನ್ನೋ ಆಸೆ.. ಆದ್ರೆ ಕೆಲ್ಸಾ ಕೆಲ್ಸಾ ಎಂದು ಸದಾ ಬ್ಯುಸಿಯಾಗಿರುವ ಯುವಕರಿಗೆ ಫಿಟ್ನೆಸ್ ಕಡೆಗೆ ಗಮನ ಕೊಡೋಕೆ ಸಮಯವೇ ಇರಲ್ಲ. ಫಿಟ್ ಆಗಿರಲು ಯಾವುದೇ ವರ್ಕೌಟ್ ಮಾಡಿದ್ರೂ ಕೆಲವರಿಗೆ ಕೈ ಹಿಡಿಯಲ್ಲ. ವರ್ಕೌಟ್ ಮಾಡುವುದಕ್ಕೆ ಕೆಲವರಿಗೆ ಟೈಮ್ ಇರಲ್ಲ. ಹೀಗಾಗಿ ನೀವು ಈ 30 ವಯಸ್ಸಿನ ಎನ್‌ಆರ್‌ಐ ಬಗ್ಗೆ ತಿಳಿದುಕೊಳ್ಳಲೇಬೇಕು. ಅನಿವಾಸಿ ಭಾರತೀಯ( ಎನ್‌ಆರ್‌ಐ )ಮಾಕ್ಸ್ ಪಾಲೊಸ್ ಸದ್ಯ 21 ಕೆ.ಜಿಯಷ್ಟು ತೂಕ ಇಳಿಸಿಕೊಂಡಿದ್ದಾರೆ. ಅದು 3 ತಿಂಗಳಲ್ಲೇ..! ಈಗ ಫ್ಯಾಟ್‌ನಿಂದ ಹೊರಬಂದು ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ.

ಮ್ಯಾಕ್ಸ್ ಅವರ ತೂಕ ಇಳಿಕೆ ಜರ್ನಿ ಹೀಗಿತ್ತು..
ಬಹಳಷ್ಟು ಮಂದಿ ತೂಕ ಇಳಿಕೆ ಬಗ್ಗೆ ನಿರ್ಧರಿಸ್ತಾರೆ. ಫಿಟ್ನೆಸ್‌ ಬಗ್ಗೆ ಪ್ಲ್ಯಾನ್ ಮಾಡ್ತಾರೆ. ಆದ್ರೆ ಮಾಕ್ಸ್ ಫಿಟ್‌ನೆಸ್‌ಗಾಗಿ ಮಾಡಿದ್ದು ಅಷ್ಟಿಷ್ಟಲ್ಲ. ಆಸ್ಟ್ರೇಲಿಯಾದಲ್ಲಿ ಫೈನಾನ್ಶಿಯಲ್ ಅಕೌಂಟೆಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು, ತೂಕ ಇಳಿಕೆಗಾಗಿ 2014ರಿಂದ ಜರ್ನಿ ಸ್ಟಾರ್ಟ್ ಮಾಡಿದ್ರು. 8 ವರ್ಷಗಳ ಹಿಂದೆಯೇ ದೇಶಕ್ಕೆ ತೆರಳಿದ್ದರು. ಆಗ ಸುಮಾರು 16 ಕೆ.ಜಿ ತೂಕ ಹೆಚ್ಚಾಗಿತ್ತಂತೆ. ತೂಕ ಹೆಚ್ಚಳ ಅವರ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಿತ್ತು. ತೂಕವನ್ನು ಕಳೆದುಕೊಳ್ಳೋದು ಹೇಗೆ? ಎಂಬ ಮ್ಯಾಕ್ಸ್‌ಗೆ ಆಸಕ್ತಿ ಹೆಚ್ಚಾಯ್ತು. ಅವರು ಹೇಳುವ ಪ್ರಕಾರ, ಆಗ ನಾನು ಮನುಷ್ಯನ ದೇಹದ ಹಿಂದಿರುವ ವಿಜ್ಞಾನವನ್ನು ಕ್ರಮೇಣ ಅರ್ಥೈಸಿಕೊಳ್ಳಲಾರಂಭಿಸಿದೆ. ತೂಕದ ನಷ್ಟಕ್ಕೆ ಸಂಬಂಧಿಸಿದಂತೆ ಸಂಶೋಧನೆ ಆರಂಭಿಸಿದೆ. ಆರಂಭದಲ್ಲಿ ನನ್ನ ದೇಹದ ಪ್ರಕಾರ, ವಿಭಿನ್ನ ಆಹಾರ ಮತ್ತು ತೂಕ ನಷ್ಟಕ್ಕೆ ಸಂಬಂಧಿಸಿದ ತಂತ್ರಗಳ ಜತೆಗೆ ಪ್ರಯೋಗ ಮಾಡಲು ಆರಂಭಿಸಿದೆ. ಇದ್ರಿಂದ ಅತೀ ಶೀಘ್ರದಲ್ಲೇ ನಾನು ಪರಿಣಾಮಕಾರಿ ಫಲಿತಾಂಶ ಕಂಡು ಕೊಂಡೆ. ನಾನು 3 ತಿಂಗಳಲ್ಲೇ 21 ಕೆ.ಜಿ ತೂಕ ಕಳೆದುಕೊಂಡೆ. ದೈಹಿಕ ಮಸಲ್ಸ್ ಸಂಪೂರ್ಣ ಚೇಂಜ್ ಆಯ್ತು ಎನ್ನುತ್ತಾರೆ.

ಜಸ್ಟ್  3 ತಿಂಗಳಲ್ಲೇ ವೇಟ್ ಲಾಸ್
ನಾನು ಚಿಕ್ಕವನಿದ್ದಾಗ ಯಾವಾಗಲು ಆ್ಯಕ್ಟಿವ್ ಆಗಿದ್ದೆ. ವೇಗ ಹಾಗೂ ಚುರುಕು ಬುದ್ಧಿ ಇದ್ದ ಕಾರಣಕ್ಕೆ ನಾನು ಶಾಲಾ ದಿನಗಳಲ್ಲೇ ಕ್ರೀಡಾಪಟುವಾಗಿದ್ದೆ. ಉನ್ನತ ಶಿಕ್ಷಣಕ್ಕಾಗಿ ನಾನು ಆಸ್ಟ್ರೇಲಿಯಾಗೆ ಹೋದಾಗ, ಅಲ್ಲಿ ಸೀಗುವ ಎಲ್ಲಾ ಆಹಾರವನ್ನು ಸೇವಿಸುತ್ತಿದ್ದೆ. ಡಯೆಟ್ ಮಾಡ್ತಿರಲಿಲ್ಲ. ಆಗ ನನಗೆ ಸಮತೋಲಿತ ಆಹಾರದ ಕಡೆಗೆ ಗಮನ ಕೇಂದ್ರಿಕರಿಸಲು ಕಷ್ಟವಾಗ್ತಿತ್ತು. ನಾನು ಅಂದೇ ದೇಹದ ಕೊಬ್ಬನ್ನು ನಿಯಂತ್ರಿಸಲು ನಿರ್ಧರಿಸಿದೆ. ವೇಟ್‌ ಲಾಸ್‌ಗೆ ಕ್ಯಾಲೋರಿ ಮುಖ್ಯವಾಗುತ್ತದೆ ಎಂದು ಅರ್ಥವಾಯ್ತು. ಡಯೆಟ್, ಜಿಮ್‌ನಲ್ಲಿ ವರ್ಕೌಟ್ ಮಾಡಿದಾಗ ಕ್ಯಾಲೋರಿ ಕಳೆದುಕೊಳ್ಳಲು ಸಹಾಯವಾಯ್ತು. ತೂಕ ಇಳಿಕೆಗೆ ಇದು ಸಹಾಯವಾಯ್ತು ಎಂದು ಮ್ಯಾಕ್ಸ್ ಹೇಳ್ತಾರೆ.

ಈಗ ತುಂಬಾ ತೆಳ್ಳಗೆ ಹಾಗೂ ಆ್ಯಕ್ಟಿವ್ ಆಗಿದ್ದೇನೆ. ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವೇಳೆ ವಾರಕ್ಕೆ ಐದು ದಿನ,  2 ಗಂಟೆಗಳ ಕಾಲ ಜಿಮ್‌ನಲ್ಲಿ ವರ್ಕೌಟ್ ಮಾಡ್ತಿದ್ದೆ. ಕಾರ್ಡಿಯೋಗೆ ಸಂಬಂಧಪಟ್ಟ ಎಕ್ಸ್‌ಸೈಜ್ ಅನ್ನ ಸ್ಕಿಪ್ ಮಾಡ್ತಿರಲಿಲ್ಲ. ಹೃದಯ ರಕ್ತನಾಳದ ಆರೋಗ್ಯ ಪ್ರತಿಯೊಬ್ಬರಿಗೂ ಅತಿ ಮುಖ್ಯವಾದದ್ದು ಎಂದು ನಾನು ನಂಬುತ್ತೇನೆ. ಹಾಗಾಗಿ ನಾನು ಎಂದಿಗೂ ಇದರ ಬಗ್ಗೆ ನೆಗ್ಲೆಕ್ಟ್ ಮಾಡ್ತಿರಲಿಲ್ಲ. ರನ್ನಿಂಗ್‌ ಹೃದಯಕ್ಕೆ ಒಳ್ಳೆಯದು. ಹಾಗಾಗಿ ನನ್ನ ಹೃದಯದ ಆರೋಗ್ಯ ಹೆಚ್ಚಿಸಿಕೊಳ್ಳಲು ರನ್ನಿಂಗ್ ಮಾಡ್ತಿದ್ದೆ. ತೂಕ ಇಳಿಸಿಕೊಳ್ಳುವುದು ಹಾಗೂ ದೇಹದ ಕೊಬ್ಬನ್ನು ನಿವಾರಿಸುವುದು ಎರಡು ವಿಭಿನ್ನ ವಿಷಯಗಳು ಎಂದು ಮ್ಯಾಕ್ಸ್ ವಿವರಿಸುತ್ತಾರೆ. ನಾನು ತೂಕವನ್ನು ಇಳಿಸಿಕೊಳ್ಳಲು ಆರಂಭಿಸಿದಾಗ, ಮಸಲ್ಸ್ ಮಾಸ್‌ (ಸ್ನಾಯು ಸಂಕೀರ್ಣ)ನ್ನು ಕಳೆದು ಕೊಳ್ಳುತ್ತಿದ್ದೇನೆ ಎಂದು ಅರಿವಾಯಿತು. ಆಗ ನನ್ನ ಲುಕ್‌ನಲ್ಲಿ ಬದಲಾವಣೆ ಆಯಿತು. ನಾನು ತುಂಬಾ ತೆಳ್ಳಗಾಗಿಯೇ ಕಾಣಿಸ್ತಿದ್ದೆ ಎನ್ನುತ್ತಾರೆ.

ತೂಕ ನಷ್ಟಕ್ಕೆ ಡಯಟ್ ಫಾಲೋ ಮಾಡಿದ್ದೇನು?
ತೂಕ ಕಡಿಮೆ ಮಾಡಿಕೊಳ್ಳಲು ಡಯಟ್‌ಗೆ ಶೇ. 70ರಷ್ಟು ಹಾಗೂ ವ್ಯಾಯಾಮಕ್ಕೆ ಶೇ.30 ರಷ್ಟು ಗಮನ ಹರಿಸಬೇಕಾಗುತ್ತದೆ. ಮ್ಯಾಕ್ಸ್ ಅವರು ತೂಕ ಇಳಿಕೆಗೆ ಆಹಾರ ಕ್ರಮ ಸಹಾಯ ಮಾಡಿತ್ತು. ಅವರು ಪ್ರತಿನಿತ್ಯ ತಾವು ಸೇವಿಸುತ್ತಿದ್ದ ಆಹಾರದ ಬಗ್ಗೆ ಹೇಳಿದ್ದಾರೆ. ಬೆಳಗಿನ ಉಪಹಾರಕ್ಕೆ ಓಟ್ಸ್ ಹಾಗೂ ಹಣ್ಣಿನ ಸ್ಲೈಸ್ ಸೇವಿಸಬೇಕು. ಮುಖ್ಯವಾಗಿ ಬಾಳೆಹಣ್ಣು ಹಾಗೂ ಅಥವಾ ಸೇಬು ಹಣ್ಣು ಇರಲೇಬೇಕಂತೆ.

ಲಂಚ್‌ (4 ಗಂಟೆಗಳ ನಂತರ) : ಬ್ರೌನ್ ಅಕ್ಕಿ ಮತ್ತು ಟ್ಯೂನ್ ಮೀನು, ಇದಕ್ಕೆ ಫ್ಲೆವರ್‌ಗೆ ಸ್ಪೈಸಿಗಾಗಿ ಚಿಲ್ಲಿ ಉಪಯೋಗಿಸಬಹುದು. ಊಟ ಆದ್ಮೇಲೆ ಸಂಜೆಯ ವರ್ಕೌಟ್ ಮಧ್ಯೆ ಇವ್ರು ಯಾವುದೇ ಸ್ನ್ಯಾಕ್ಸ್‌ಗಳನ್ನು ಉಪಯೋಗಿಸುತ್ತಿರಲಿಲ್ಲ.

ರಾತ್ರಿ ಡಿನ್ನರ್‌ಗೆ , ಚಿಕನ್ ಬ್ರೆಸ್ಟ್ ಹಾಗೂ ಕೋಸುಗಡ್ಡೆ ಉಪಯೋಗಿಸಬೇಕು. ಇದಕ್ಕೆ ಫ್ಲೆವರ್‌ಗಾಗಿ ಸ್ಪಿರ್ಕಲ್ ತಂದೂರಿ ಮಸಾಲಾ, ಹಾಗೂ ಉಪ್ಪು. ಹಾಗೂ ಆಲಿವ್ ಎಣ್ಣೆಯನ್ನ ಸಹ ಇದಕ್ಕೆ ಉಪಯೋಗಿಸಬಹುದು. ಇನ್ನೂ ಸಕ್ಕರೆಯನ್ನ ಸೇವಿಸಬಾರದು. ಸರಿಯಾದ ವ್ಯಾಯಾಮ ಹಾಗೂ ಆಹಾರ ಕ್ರಮ ಫಾಲೋ ಮಾಡಿದ್ರೆ 3 ತಿಂಗಳಲ್ಲೇ ತೂಕ ಇಳಿಸಿಕೊಳ್ಳಬಹುದು. ತೂಕ ಇಳಿಕೆ ರಾತ್ರೋರಾತ್ರಿ ಆಗುವಂತಹದ್ದಲ್ಲ. ಇದಕ್ಕೆ ಸಾಕಷ್ಟು ತಾಳ್ಮೆ ಇರಬೇಕಂತೆ, ಮಾನಸಿಕವಾಗಿ ಸಿದ್ಧವಾಗಿರಬೇಕು, ಅಂದುಕೊಂಡ ಗುರಿ ಸಾಧಿಸಬಹುದು. ಎಲ್ಲಕ್ಕಿಂತ ಫಸ್ಟ್ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕಂತೆ. ಹಾರ್ಡ್‌ ವರ್ಕಿಂಗ್‌, ಪ್ರತಿ ಬಾರಿ ಫೇಲ್‌ ಆದಾಗ ಮತ್ತೊಂದು ಸಲ ಪ್ರಯತ್ನಿಸಬೇಕು ಎಂಬುದು ಮ್ಯಾಕ್ಸ್ ಸಲಹೆ. ನನ್ನ ದೈಹಿಕ ಹಾಗೂ ಆಧ್ಯಾತ್ಮಿಕ ಫಿಟ್ನೆಸ್‌ಗಾಗಿ ಪ್ರತಿದಿನ ಗುಣಮಟ್ಟದ ಸಮಯವನ್ನು ಸಮರ್ಪಣೆ ಮಾಡುತ್ತೇನೆ. ಬ್ಯುಸಿ ವೃತ್ತಿ ಮಧ್ಯೆಯೂ ಸ್ವಲ್ಪ ಸಮಯವನ್ನು ಪ್ರತಿಯೊಬ್ಬರು ವರ್ಕೌಟ್‌ಗಾಗಿ ಮೀಸಲಿಡಬೇಕು ಎಂಬುದು ಮ್ಯಾಕ್ಸ್ ಅಭಿಪ್ರಾಯ.

ವಿಶೇಷ ಬರಹ: ಸುಧಾ ಉಜ್ಜಾ


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv