55 ಕೆ.ಜಿ ತೂಕ ಇಳಿಸಿದ ಯುವಕ..ಇವರ ವರ್ಕೌಟ್ ಜರ್ನಿ ಹೀಗಿತ್ತು!

ಬೆಳಿಗ್ಗೆ ಕೆಲಸಕ್ಕೆ ಹೋಗೋ ಗಡಿಬಿಡಿ..ಆಫೀಸ್‌ನಲ್ಲಿ ಕೆಲಸದ ಒತ್ತಡ.., ಫಿಟ್ನೆಸ್, ವರ್ಕೌಟ್‌ಗೆ ಎಲ್ಲಿ ಸಮಯವಿದೆ ಹೇಳಿ? ಎನ್ನುವವರೇ ಹೆಚ್ಚು. ಇನ್ನೂ ಕೆಲವರು ತೂಕ ನಷ್ಟಕ್ಕೆ ಕೊನೆಯವರೆಗೂ ಹೋರಾಡುತ್ತಲೇ ಇರುತ್ತಾರೆ. ಫಿಟ್ ಆಗಿರಲು ಯಾವುದೇ ವರ್ಕೌಟ್ ಮಾಡಿದ್ರೂ ಸಕ್ಸಸ್ ಕಾಣಲ್ಲ. ಆದ್ರೆ ಕೆಲವರು ಮಾತ್ರ ಯಶಸ್ವಿಯಾಗಿ ಹೊರಹೊಮ್ಮುತ್ತಾರೆ. ನೀವು ಈ 22ರ ಹರೆಯದ ತನ್ಮಯ್ ಜೋಷಿ ಬಗ್ಗೆ ತಿಳಿದುಕೊಳ್ಳಲೇಬೇಕು. ಸದ್ಯ ಇವರು 55 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಮೊದಲು 135 ಕೆ.ಜಿ ತೂಕವಿದ್ದ ತನ್ಮಯ್​​​, ವರ್ಕೌಟ್‌ನಿಂದ 55 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಈಗ 75 ಕೆ.ಜಿ ತೂಕ ಹೊಂದಿದ್ದಾರೆ. ಫ್ಯಾಟ್‌ನಿಂದ ಹೊರಬಂದು ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ.

ಮಹಾರಾಷ್ಟ್ರ ಚಂದ್ರಪುರ್‌ದ ತನ್ಮಯ ಜೋಶಿ ತಮ್ಮ ಫಿಟ್ನೆಸ್‌ ಬಗ್ಗೆ ರಿವೀಲ್ ಮಾಡಿದ್ದಾರೆ. ತೂಕ ನಷ್ಟಕ್ಕೆ ಇವರು ಫಾಲೋ ಮಾಡಿದ್ದೇನು? ಯಾವೆಲ್ಲಾ ಆಹಾರ ಸೇವಿಸುತ್ತಿದ್ದರು? ಅನ್ನೋ ಡಿಟೇಲ್ಸ್ ಇಲ್ಲಿದೆ.

ತೂಕ ನಷ್ಟಕ್ಕೆ ಡಯಟ್ ಫಾಲೋ ಮಾಡಿದ್ದೇನು?
ತನ್ಮಯ್ ತೂಕ ಇಳಿಕೆಗೆ ಆಹಾರ ಕ್ರಮ ಸಹಾಯ ಮಾಡಿತ್ತು. ಅವರು ಪ್ರತಿನಿತ್ಯ ತಾವು ಸೇವಿಸುತ್ತಿದ್ದ ಆಹಾರದ ಬಗ್ಗೆ ಹೇಳಿಕೊಂಡಿದ್ದಾರೆ. ಫಿಟ್ನೆಸ್ ವೇಳೆ ಫಾಲೋ ಮಾಡ್ತಿದ್ದ ಡಯಟ್ ಯಾವುದು? ಅವರ ಬ್ರೇಕ್‌ಫಾಸ್ಟ್, ಲಂಚ್ , ಡಿನ್ನರ್‌ನಲ್ಲಿ ಯಾವೆಲ್ಲಾ ಆಹಾರ ಸೇವಿಸುತ್ತಿದ್ದರು ಎಂಬುದರ ಬಗ್ಗೆ ರಿವೀಲ್ ಮಾಡಿದ್ದಾರೆ.

ವರ್ಕೌಟ್‌ಗೂ ಮುನ್ನ (ಬೆಳಿಗ್ಗೆ 7 ಗಂಟೆ): ಡ್ರೈ ಫ್ರೂಟ್ಸ್‌ ( ಬಾದಾಮಿ ಮತ್ತು ವಾಲ್ನಾಟ್), ಕಿತ್ತಳೆ ಹಣ್ಣು
ವರ್ಕೌಟ್ ನಂತರ (ಬೆಳಿಗ್ಗೆ 10 ಗಂಟೆ): ಓಟ್ಸ್ ಮತ್ತು ಮೊಟ್ಟೆಯ ಬಿಳಿ ಭಾಗ
ಮಧ್ಯಾಹ್ನದ ಊಟ (1 ಗಂಟೆಗೆ): ಮೊಳಕೆ ಕಾಳು, ಕಡಲೆಕಾಳು ಹಾಗೂ ಮಜ್ಜಿಗೆ ( ಊಟ ಮಾಡುವ ಟೈಂನಲ್ಲಿ ನೀರು ಸೇವಿಸುವ ಬದಲು, ಮಜ್ಜಿಗೆ ಸೇವಿಸಿ)
ಸ್ನ್ಯಾಕ್ಸ್​( ಸಂಜೆ 5ಕ್ಕೆ): ಓಟ್ಸ್, ಮೊಟ್ಟೆಯ ಬಿಳಿ ಭಾಗ
ರಾತ್ರಿ ಊಟ (8 ಗಂಟೆ) : ಮೊಳಕೆ ಕಾಳು, 2 ರೊಟ್ಟಿ, ಪಲ್ಯ, ದಾಲ್, ಸಲಾಡ್
ಪ್ರತಿದಿನ 6-7 ಲೀಟರ್ ನೀರು ಸೇವಿಸಬೇಕು. ಅಲ್ಲದೆ ಉಪ್ಪು ಫ್ಯಾಟ್ ಬರ್ನಿಂಗ್ ಕಡಿಮೆಗೊಳಿಸೋದ್ರಿಂದ ಕನಿಷ್ಟ ಪ್ರಮಾಣದಲ್ಲಿ ಉಪ್ಪು ಸೇವಿಸಬೇಕು.

ಆರಂಭದಲ್ಲಿ ಬ್ರೌನ್ ಬ್ರೆಡ್ ಹಾಗೂ ಬ್ರೌನ್ ರೈಸ್‌ ಸೇವಿಸುತ್ತಿದ್ದೆ. ಆದ್ರೆ ಕ್ರಮೇಣವಾಗಿ ಈ ಆಹಾರ ಸೇವಿಸುವುದನ್ನು ನಿಲ್ಲಿಸಿದೆ. ಹಬ್ಬ ಹರಿದಿನಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸಿಹಿ ಪದಾರ್ಥ, ಬಿರಿಯಾನಿ ಸೇವಿಸುತ್ತೇನೆ ಎನ್ನುತ್ತಾರೆ ತನ್ಮಯ್​​.

ತನ್ಮಯ ಜೋಷಿ, 2 ವರ್ಷದಲ್ಲಿ ಸುಮಾರು 55 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.  ಫಿಟ್ನೆಸ್ ಎಂಬುದು ಜೀವನಶೈಲಿಗೆ ಅಡ್ಡಿ ಅಂತ ಅಂದುಕೊಂಡರೆ ನೀವು ಮಧ್ಯೆದಲ್ಲೇ ನಿಮ್ಮ ಗುರಿ ಬಿಟ್ಟು ಬಿಡುತ್ತೀರಿ ಅನ್ನೋದು ಅವರ ಅಭಿಪ್ರಾಯ. ಹಾಗೇ ತನ್ಮಯ್ ಕೂಡಾ ಫಿಟ್ನೆಸ್ ತಂತ್ರಗಾರಿಕೆ ಬಗ್ಗೆ ಅರಿತುಕೊಂಡರು, ತೂಕ ಹೆಚ್ಚಾಗುತ್ತಿದ್ದಂತೆ ತೊಂದರೆ ಅನುಭವಿಸುತ್ತಿರುವುದನ್ನು ಅರಿತರು. ಬಳಿಕ 2014ರಿಂದ ಫಿಟ್ನೆಸ್ ಬಗ್ಗೆ ಗಮನ ನೀಡಿದರು. ಜಿಮ್‌ಗೆ ಹೋಗಿ ವರ್ಕೌಟ್ ಮಾಡಲು ಆರಂಭಿಸಿದರು. ಆದ್ರೆ ವರ್ಕೌಟ್‌ ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. 2016ರ ಅಂತ್ಯದ ವೇಳೆಗೆ ಅವರಿಗೆ ಆಯಾಸ ಹಾಗೂ ತೀವ್ರ ಬೆನ್ನು ನೋವಿನ ಸಮಸ್ಯೆ ಎದುರಾಯಿತು. ಈ ಸಮಸ್ಯೆ ಹೆಚ್ಚಾದ್ದಂತೆ ಹೇಗಾದರೂ ಮಾಡಿ ತೂಕ ಇಳಿಕೆ ಮಾಡಿಕೊಳ್ಳಬೇಕು ಎಂದು ಅವರು ನಿರ್ಧರಿಸಿದ್ದರಂತೆ. 2017ರಿಂದ ಫಿಟ್ನೆಸ್‌ ಅನ್ನು ಸಿರಿಯಸ್‌ ಆಗಿ ತೆಗೆದುಕೊಳ್ಳಲು ಆರಂಭಿಸಿದೆ. ಈ ಮೊದಲು ನಾನು ಎಲ್ಲವನ್ನು ತಿನ್ನುತ್ತಿದ್ದೆ. ಜಂಕ್ ಫುಡ್, ಸಿಹಿ ತಿಂಡಿ, ರೈಸ್ ಮೀಲ್, ಆಲುಗಡ್ಡೆ ಸೇವಿಸುತ್ತಿದ್ದೆ ಎನ್ನುತ್ತಾರೆ ತನ್ಮಯ್​​​

ರೈಟ್ ಎಕ್ಸರ್ಸೈಜ್ ಯಾವುದು?
ಆರೋಗ್ಯಕರ ಜೀವನಶೈಲಿಯನ್ನ ಸ್ಟ್ರಿಕ್ಟ್ ಆಗಿ ಫಾಲೋ ಮಾಡಲು ತನ್ಮಯ್​​​ ಆರಂಭಿಸಿದರು. ಕಟ್ಟುನಿಟ್ಟಿನ ಆಹಾರ ಕ್ರಮ ಹಾಗೂ ವ್ಯಾಯಾಮ, ವರ್ಕೌಟ್ ಬಗ್ಗೆ ದಿನಚರಿ ಇಟ್ಟುಕೊಂಡರು. ಕೊನೆಗೆ ರಿಸಲ್ಟ್ ಬರುವವರೆಗೂ ಇದನ್ನೇ ಫಾಲೋ ಮಾಡಲು ನಿರ್ಧಾರ ಕೈಗೊಂಡರು. “ಮೊದಲ ಮೂರು ತಿಂಗಳ ಕಾಲ ಕಾರ್ಡಿಯೋ ಟ್ರೈನಿಂಗ್ ಅಭ್ಯಾಸವನ್ನು ಕಟ್ಟುನಿಟ್ಟಾಗಿ ಅನುಸರಿಸಿದೆ. ಆಗ ನಿಧಾನವಾಗಿ ತೂಕದ ಜತೆ ಜತೆಗೆ ಕಾರ್ಡಿಯೋ ಟ್ರೈನಿಂಗ್, ವೇಯ್ಟ್​​ ಟ್ರೈನಿಂಗ್‌ ಆರಂಭಿಸಿದೆ. ವಾರಕ್ಕೊಮ್ಮೆ 1 ದಿನ ಮಾತ್ರ ಕಾರ್ಡಿಯೋ ಟ್ರೈನಿಂಗ್‌ನಲ್ಲಿ ಭಾಗವಹಿಸುತ್ತಿದ್ದೆ ಅಂತ ತನ್ಮಯ್​​ ತಿಳಿಸಿದ್ದಾರೆ.

ವಿಶೇಷ ಬರಹ: ಸುಧಾ ಉಜ್ಜಾ

Follow us on:

YouTube: firstNewsKannada Instagram: firstnews.tv Facebook: firstnews.tv Twitter: firstnews.tv