ಬಿಗ್ ಬಾಸ್-5 ರನ್ನರ್​​ ಅಪ್ ದಿವಾಕರ್ ಈಗೇನು ಮಾಡ್ತಿದ್ದಾರೆ..?

ಸೇಲ್ಸ್ ಮ್ಯಾನ್ ದಿವಾಕರ್, ಈ ಹೆಸರು ಕೇಳಿದ್ರೆ ಥಟ್ ಅಂತ ಅದ್ಯಾರು ಅಂತ ನೆನಪಾಗದೇ ಇರಬಹುದು. ಆದ್ರೆ, ಬಿಗ್ ಬಾಸ್ ದಿವಾಕರ್ ಅಂದ್ರೆ ಓ ಅವ್ರಾ ಅಂತಾರೆ ಜನ. ಸೇಲ್ಸ್ ಮ್ಯಾನ್ ಆಗಿದ್ದಾಗ ದಿವಾಕರ್ ಮನೆ ಮನೆಗೆ ಹೋಗ್ತಿದ್ರು. ಆದ್ರೆ, ಬಿಗ್ ಬಾಸ್​ಗೆ ಹೋಗಿ ಬಂದ ಮೇಲೆ ಅವ್ರು ಲಕ್ಷಾಂತರ ಜನಕ್ಕೆ ಹತ್ತಿರವಾಗಿದ್ದಾರೆ. ಅವರ ಮನೆ ಮಗನಂತೆಯೇ ಆಗಿ ಹೋಗಿದ್ದಾರೆ. ದಿವಾಕರ್, ಸೇಲ್ಸ್ ಮ್ಯಾನ್ ಆಗಿದ್ದಿದ್ದು, ಬಿಗ್​ ಬಾಸ್​ಗೆ ಹೋಗಿದ್ದು, ಫೈನಲ್​ಗೂ ಹೋಗಿ, ರನ್ನರ್ ಅಪ್ ಆಗಿದ್ದು ಇತಿಹಾಸ. ಆದ್ರೆ, ದಿವಾಕರ್ ಈಗ ಏನ್ ಮಾಡ್ತಿದ್ದಾರೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಌಕ್ಟಿಂಗ್​ನಲ್ಲಿ ಅದೃಷ್ಟ ಪರೀಕ್ಷೆ..!
ಬಿಗ್ ಬಾಸ್​ನಿಂದ ಹೊರ ಬಂದ ಮೇಲೆ ಸೇಲ್ಸ್ ಕೆಲಸಕ್ಕೆ ಬ್ರೇಕ್ ಕೊಟ್ಟು ದಿವಾಕರ್, ಕನಸಿನ ಲೋಕ ಅಂತಲೇ ಕರೆಸಿಕೊಳ್ಳೋ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿದ್ರು. ರೇಸ್ ಅನ್ನೋ ಕನ್ನಡ ಮತ್ತು ತೆಲುಗಿನ ದ್ವಿಭಾಷಾ ಚಿತ್ರದಲ್ಲಿ ಲೀಡ್ ರೋಲ್​ನಲ್ಲಿ ಌಕ್ಟ್ ಮಾಡಿದ್ರು. ಸದ್ಯದಲ್ಲೇ ಅದು ರಿಲೀಸ್​ಗೆ ರೆಡಿಯಾಗಿದೆ. ಇದೀಗ ಚಿಲಮ್ ಅನ್ನೋ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಌಕ್ಟ್ ಮಾಡ್ತಿದ್ದಾರೆ. ಶೂಟಿಂಗ್ ಇನ್ನೂ ಶುರುವಾಗಿಲ್ಲ, ಹೀಗಾಗಿ ಸೈಕಲ್ ಗ್ಯಾಪ್​ನಲ್ಲಿ ಕಲರ್ಸ್ ಕನ್ನಡದಲ್ಲಿ ಬರ್ತಿದ್ದ ಮಜಾ ಭಾರತ ಶೋನಲ್ಲೂ ಕಾಣಿಸಿಕೊಂಡ್ರು. ಇದೀಗ ಕಾಮನ್ ಮ್ಯಾನ್ ಅನ್ನೋ ಮತ್ತೊಂದು ಫಿಲ್ಮ್​ನಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ.

ಮತ್ತೆ ಸೇಲ್ಸ್ ಎಕ್ಸಿಕ್ಯೂಟಿವ್ ಆದ್ರು ಬಿಗ್ ಬಾಸ್ ದಿವಾಕರ್..!
ಗ್ಲಾಮರ್ ದುನಿಯಾದಲ್ಲಿ ಒಂದಷ್ಟು ಕೆಲಸ ಮಾಡಿದ್ರೂ, ಕೈತುಂಬಾ ಕೆಲಸ ಇಲ್ಲ. ಹೀಗಾಗಿ ಹೊಟ್ಟೆ ಪಾಡಿಗಾಗಿ ಮತ್ತೆ ದಿವಾಕರ್ ಬ್ಯಾಕ್ ಟು ಪೆವಿಲಿಯನ್ ಅಂತ ಸೇಲ್ಸ್ ಮ್ಯಾನ್ ಆಗಿದ್ದಾರೆ. ಕಳೆದ 4 ದಿನಗಳಿಂದ ದಿವಾಕರ್, ಕಾರವಾರ, ಕುಂದಾಪುರದಲ್ಲಿ ತಮ್ಮ ಸೇಲ್ಸ್​ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಮಂಡಿ ನೋವಿನ ತೈಲವನ್ನ ವ್ಯಾಪಾರ ಮಾಡ್ತಿದ್ದಾರೆ. ಬೆಳಗ್ಗೆಯೆಲ್ಲಾ ಬ್ಯುಸಿನೆಸ್ ಮಾಡ್ತಾರೆ. ಸಂಜೆ ಆದ್ಮೇಲೆ ಸ್ಥಳೀಯ ಲಾಡ್ಜ್​ನಲ್ಲಿ ವಾಸ್ತವ್ಯ ಹೂಡ್ತಾರೆ. ಆದ್ರೆ, ಅವ್ರು ಸೇಲ್ಸ್ ಮ್ಯಾನ್ ಆದ್ರೂ ಜನರ ಮನಸಿನಿಂದ ಮಾತ್ರ ದೂರವಾಗಿಲ್ಲ. ಈಗಲೂ ದಿವಾಕರ್​ಗೆ ಫ್ಯಾನ್ ಫಾಲೋಯಿಂಗ್ ಹಾಗೇ ಇದೆ. ಅವ್ರು ಕರಾವಳಿಯಲ್ಲಿ ತೈಲ ಮಾರಾಟಕ್ಕೆ ಅಂತ ರೋಡ್​ಗಿಳಿದ್ರೆ, ಅವರ ಫ್ಯಾನ್ಸ್ ಸೆಲ್ಫಿಗಾಗಿ ಮುಗಿಬೀಳ್ತಾರೆ. ಮತ್ತೊಂದಷ್ಟು ಜನ ಬಿಗ್ ಬಾಸ್ ಬಗ್ಗೆ ಮಾತಾಡೋಕೆ ಶುರು ಮಾಡ್ತಾರೆ. ಕೆಲವರು ಅವರ ಬಳಿ ಇರೋ ಮಂಡಿ ನೋವಿನ ತೈಲವನ್ನ ಕೊಂಡುಕೊಂಡು ಬ್ಯುಸಿನೆಸ್ ಕೂಡ ಕೊಡ್ತಿದ್ದಾರೆ.

ಅತ್ತ ಌಕ್ಟಿಂಗ್, ರಿಯಾಲಿಟಿ ಶೋನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮುಗಿಸಿ ಬಂದಿರುವ ದಿವಾಕರ್, ಈಗ ಮತ್ತೆ ತಮ್ಮ ಹಳೇ ಕೆಲಸಕ್ಕೆ ಮರಳಿದ್ದಾರೆ. ಕೆಲಸ ಮಾಡೋಕೆ ರೆಡಿ ಇರುವಾಗ ಯಾವ ಕೆಲಸ ಆದ್ರೇನು? ದಿವಾಕರ್ ಸೇಲ್ಸ್​ ಮಾರ್ಕೆಟ್​ನಲ್ಲೂ ಯಶಸ್ಸು ಕಾಣಲಿ ಅನ್ನೋದಷ್ಟೇ ಅವರ ಅಭಿಮಾನಿಗಳ ಹಾರೈಕೆ.

ವಿಶೇಷ ಬರಹ: ಸೋಮಣ್ಣ ಮಾಚಿಮಾಡ