ಸ್ಮೃತಿ ಮಂದಾನ ಬ್ಯಾಟಿಂಗ್ ಹಿಂದಿನ ಮಾಸ್ಟರ್ ಮೈಂಡ್​ ಇವರೇ..!

ವುಮೆನ್ಸ್​ ಟೀಮ್ ಇಂಡಿಯಾದ ಬ್ಯಾಟಿಂಗ್ ಸ್ಟಾರ್, ಸ್ಮೃತಿ ಮಂದಾನ ವಿಶ್ವಕ್ರಿಕೆಟ್​​ನಲ್ಲಿ ಅಮೋಘ ಬ್ಯಾಟಿಂಗ್ ಮೂಲಕ ಮಿಂಚುತ್ತಿದ್ದಾರೆ. ಅಲ್ಲದೇ ಸದ್ಯ ಐಸಿಸಿ ಏಕದಿನ ಱಂಕಿಂಗ್​ನಲ್ಲಿ ನಂ.1 ಸ್ಥಾನ ಅಲಂಕರಿಸಿದ್ದಾರೆ. ಇತ್ತೀಚೆಗೆ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಹಾಗು ಟಿ20 ಸರಣಿಯಲ್ಲೂ, ಮಂದಾನ ಅಬ್ಬರಿಸಿದ್ದು ಗೊತ್ತೇ ಇದೆ. ಆದ್ರೆ ತಂಡದ ಕೋಚ್ ​ ಡಬ್ಲೂ.ವಿ ರಾಮನ್ ಮಂದಾನ ಬ್ಯಾಟಿಂಗ್ ಹಿಂದಿನ ಮಾಸ್ಟರ್ ಮೈಂಡ್​ ಅನ್ನೋದು ಗೊತ್ತಾ..?
ಹೌದು, ಎರಡು ತಿಂಗಳ ಹಿಂದಷ್ಟೇ ತಂಡದ ಕೋಚ್ ಆಗಿ ಆಯ್ಕೆಯಾಗಿರೋ ರಾಮನ್ ಮಂದಾನ ಬ್ಯಾಟಿಂಗ್​ನಲ್ಲಿ ಪ್ರಮುಖ ಪಾತ್ರಹಿಸಿದ್ದಾರೆ. ಈ ವಿಷಯವನ್ನ ಖುದ್ದು ಮಂದಾನ ತಿಳಿಸಿದ್ದಾರೆ. ರಾಮನ್ ಅವರು ನನಗೆ ಇಷ್ಟು ಬಾಲ್​ಗಳನ್ನ ನೀನು ಆಡಲೆಬೇಕು. ಇಷ್ಟು ಓವರ್​ಗಳ ವರೆಗೆ ನೀನು ಕ್ರೀಸ್​​ನಲ್ಲಿರಬೇಕು ಎಂದು ಟಾರ್ಗೆಟ್ ನೀಡುತ್ತಿದ್ರು. ಏಕದಿನ ಪಂದ್ಯದಲ್ಲಿ 30 ಓವರ್​ಗಳವರೆಗೆ ನೀನು ಬ್ಯಾಟ್ ಬೀಸಬೇಕು. ಇನ್ನು ಟಿ20 ಯಲ್ಲಿ 13 ಓವರ್​ಗಳವರೆಗೆ ಆಡಬೇಕು. ಇದರಿಂದ ನೀನು ನಂತರ ಮತ್ತಷ್ಟು ಸಲೀಸಾಗಿ ಬ್ಯಾಟಿಂಗ್ ಮಾಡಬಹುದು. ತಂಡದ ಸ್ಕೋರ್ ಹೆಚ್ಚುತೆ ಎಂದು ಹೇಳುತ್ತಿದ್ರು. ಹೀಗಾಗಿ ಅವರ ಟಾರ್ಗೆಟ್​ ರೀಚ್ ಆಗಲು ಪ್ರಯತ್ನಿಸುತ್ತಿದೆ. ಅದರಲ್ಲಿ ಯಶಸ್ಸು ಸಾಧಿಸುತ್ತಿದೆ ಎಂದು ಮಂದಾನ ಹೇಳಿದ್ದಾರೆ.