ಐಪಿಎಲ್​​​​ನಿಂದ ಬಂದ ದುಡ್ಡಿನಲ್ಲಿ ಬ್ರಾವೋ ಮಾಡಿದ್ದೇನು ಗೊತ್ತಾ..?

ಐಪಿಎಲ್​​​​​​​​​ನಲ್ಲಿ ಬಿಡ್ಡಿಂಗ್​​ನಲ್ಲಿ ಕೋಟಿ ಕೋಟಿ ರೂ. ಜೇಬಿಗಿಳಿಸಿಕೊಂಡಿದ್ದ ಆಟಗಾರರು ಭರ್ಜರಿ ಶಾಂಪಿಂಗ್​​​ ಮಾಡ್ತಿದ್ದಾರೆ. ಮೊನ್ನೆಯಷ್ಟೇ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್​​​​ಮನ್​​​​​​​​​ ಸೂರ್ಯಕುಮಾರ್ ಯಾದವ್ ಐಪಿಎಲ್​​​ನಿಂದ ಬಂದ ಹಣದಲ್ಲಿ ಕಾರು ಖರೀದಿಸಿ ತಮ್ಮ ಪೋಷಕರಿಗೆ ಗಿಫ್ಟ್​​ ನೀಡಿದ್ರು. ಇದೀಗ ಡ್ವೇನ್ ಬ್ರಾವೋ ಸರದಿ.

ದುಬಾರಿ ಕಾರು ಖರೀದಿಸಿದ ಬ್ರಾವೋ
ಹೌದು…ಡ್ವೇನ್ ಬ್ರಾವೋ ಐಪಿಎಲ್​​​ ಸೀಸನ್ 11ರ ಹರಾಜಿನಲ್ಲಿ (ಆರ್​​ಟಿಎಮ್​​​​​ ಕಾರ್ಡ್ ) 6.4 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಸೇರಿದ್ರು. ಅಷ್ಟೇ ಅಲ್ಲದೇ ಸಿಎಸ್​​ಕೆ ಫ್ರಾಂಚೈಸಿಗಳು ನೀಡಿದ್ದ ಹಣಕ್ಕೆ ತಕ್ಕಂತೆ ಬ್ರಾವೋ ಉತ್ತಮ ಪರ್ಫಾರ್ಮೆನ್ಸ್ ನೀಡಿದ್ದಾರೆ. ಇದೀಗ ಬ್ರಾವೋ ಐಪಿಎಲ್​​ನಿಂದ ಬಂದ ಹಣದಲ್ಲಿ ದುಬಾರಿ ಬೆಲೆಯ ಹೊಸ ಸ್ಪೋರ್ಟ್ಸ್ ಕಾರು ಖರೀದಿಸಿದ್ದಾರೆ. ಅಮೇರಿಕಾದ ಮೂಲದ ಫೋರ್ಡ್ ಕಂಪನಿಯ ಮಸ್ಟಾಂಗ್ ಎನ್ನುವ ಸ್ಪೋರ್ಟ್ಸ್ ಕಾರು ಖರೀದಿಸಿದ್ದು. ನ್ಯೂ ಜನರೇಶನ್​​​​​​ನ​​​​​​ ಎಲ್ಲಾ ಫೀಚರ್​​​ಗಳು ಈ ಕಾರಿನಲ್ಲಿವೆ. ಅಷ್ಟೇ ಅಲ್ಲದೇ ಈ ಕಾರಿಗೆ ಜಗತ್ತಿನಲ್ಲಿ ಅತ್ಯಂತ ಹೆಚ್ಚಾಗೆ ಸೇಲ್ ಆಗುತ್ತಿದೆ. ಇದೇ ಕಂಪನಿಯ ಕಾರನ್ನ ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಖರೀದಿಸಿದ್ದನ್ನ ಇಲ್ಲಿ ಸ್ಮರಿಸಬಹುದು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv