Facebook ನಿಂದ ನಿಮ್ಮ ಮೇಲೆ ಪಾಸಿಟಿವ್, ನೆಗೆಟಿವ್ ಪರಿಣಾಮ ಹೇಗಾಗುತ್ತದೆ !?

ಇವತ್ತಿನದ ದಿನಮಾನದಲ್ಲಿ ಸಾಮಾಜಿಕ ಜಾಲತಾಣಗಳು ನಮ್ಮ ಬದುಕಿನ ಮುಖ್ಯ ಭಾಗವಾಗಿ ಬಿಟ್ಟಿವೆ. ಫೇಸ್​ಬುಕ್​, ಟ್ವಿಟರ್​, ವಾಟ್ಸಪ್, ಇನ್ಸ್​​ಟಾಗ್ರಾಮ್ ಇವುಗಳನ್ನ ಬಿಟ್ಟು ಇರೋದಕ್ಕೆ ಸಾಧ್ಯವಿಲ್ಲ ಅನ್ನೋ ನಿರ್ಧಾರಕ್ಕೆ ಬಂದು ಬಿಟ್ಟಾಗಿದೆ.

ಆದ್ರೆ ಇತ್ತೀಚೆಗೆ ನಡೆದ ಅಧ್ಯಯನದ ವರದಿ ಒಂದನ್ನ ಜರ್ನಲ್ ಹೆಲಿಯೊನ್ ಅನ್ನೋ ಪತ್ರಿಕೆ ಪ್ರಕಟಿಸಿದ್ದು, ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಇರೋದ್ರಿಂದ ನಮ್ಮ ಮೇಲೆ ಹೇಗೆ ಪಾಸೆಟೀವ್ ಮತ್ತು ನೆಗೆಟೀವ್ ಪರಿಣಾಮ ಬೀರುತ್ತದೆ ಅನ್ನೋದನ್ನ ಹೇಳಿದೆ. ಬಿಡುವು ಸಿಕ್ಕಾಗಲೆಲ್ಲಾ ಫೇಸ್​ಬುಕ್​.. ಟ್ವಿಟರ್​ನಲ್ಲಿಯೇ ಕಳೆಯುತ್ತೇವೆ. ಇದು ನಮ್ಮ ಮಾನಸಿಕ ಜೀವನ ಮೇಲೆ ಪರಿಣಾಮ ಬೀರುತ್ತಿದೆ. ಯುನಿವರ್​​ಸಿಟಿ ಆಫ್​ ಸರ್ವೇಯ ಸಂಶೋಧಕ Bridget Dibb ಹೇಳುವ ಪ್ರಕಾರ, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನ ಇತರರಿಗೆ ಹೋಲಿಕೆ ಮಾಡಿಕೊಳ್ಳುತ್ತೇವೆ. ಬೇರೆಯವರಿಗೆ ನಮ್ಮನ್ನ ಕಂಪೇರ್​ ಮಾಡಿಕೊಂಡು ನಮ್ಮ ಬಗ್ಗೆ ಯೋಚನೆಗಳನ್ನ ಮಾಡುತ್ತೇವೆ. ಸಾಮಾಜಿಕ ಜಾಲತಾಣಗಳಿಂದ ನಮ್ಮ ಮೇಲೆ ಉಂಟಾಗುವ ಎಮೋಷನ್​ಗಳು ನಮ್ಮ ಕ್ವಾಲಿಟಿ ಲೈಫ್ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಅಂತಾ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಆಗಿರುವ ಒಂದು ಸ್ಟೇಟಸ್​​​ ಅಥವಾ ಫೋಟೋ ನೋಡಿ ನಾವು ನಮ್ಮನ್ನ ಮೌಲ್ಯಮಾಪನ ಮಾಡಿಕೊಳ್ಳುತ್ತೇವೆ. ಅಲ್ಲದೇ ಸಮಾಜದಲ್ಲಿ ಸಿಗುವ ಗೌರವವನ್ನ ಇತರರೊಂದಿಗೆ ಮಾಡಿಕೊಳ್ತೇವೆ. ಈ ರೀತಿ ನಾವು ನಮ್ಮನ್ನ ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವಾಗ ಪಾಸಿಟಿವ್​ ಆಗಿ ಹೋಲಿಕೆ ಮಾಡಿಕೊಂಡರೆ ಅದು ನಮ್ಮ ಮಾನಸಿಕ ಅಭಿಪ್ರಾಯಗಳ ಮೇಲೆ ಪಾಸಿಟಿವ್​ ಎಫೆಕ್ಟ್​ ಬೀರುತ್ತದೆ. ಜೊತೆಗೆ ನಮ್ಮ ಕ್ವಾಲಿಟಿ ಆಫ್​ ಲೈಫ್​ ಮೇಲಿನ ನಮ್ಮ ಅಭಿಪ್ರಾಯವನ್ನ ನಮಗೆ ತಿಸುತ್ತದೆ. ಸಾಮಾಜಿಕ ಹೋಲಿಕೆ ಮಾಡಿಕೊಳ್ಳುವವರು ತಮ್ಮನ ತಾವು ಹೇಗೆ, ಮತ್ತು ಯಾವ ರೀತಿ ವ್ಯಾಖ್ಯಾನಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವರ ಸೆಲ್ಫ್​ ಇಮೇಜ್​​ ನಿರ್ಧಾರವಾಗುತ್ತದೆ ಎಂದು ಅಧ್ಯಯನ ಹೇಳಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮನ್ನ ಇತರರೊಂದಿಗೆ ಹೋಲಿಕೆ ಮಾಡಿಕೊಂಡಾಗ ಪಾಸಿಟಿವ್​​ ಆಗಿ ಭಾವನೆಗಳನ್ನ ಹೊಂದಿರುವವರು,ತಮ್ಮ ಆರೋಗ್ಯದ ಮೇಲೆ ಬಹಳಷ್ಟು ಗಮನವಹಿಸುತ್ತಾರೆ ಎಂದು ತಿಳಿದುಬಂದಿದೆ ಅಂತಾ ಅಧ್ಯಯನ ತಿಳಿಸಿದೆ.