ಮನೆ ಕಿಟಕಿ ಮುರಿದು, ಮಾಲೀಕರನ್ನ ಕಟ್ಟಿ ಹಾಕಿ ದರೋಡೆ

ಧಾರವಾಡ: ಮನೆಯ ಕಿಟಕಿ ಗ್ರಿಲ್ ಮುರಿದು ದರೋಡೆ ಮಾಡಿರುವ ಪ್ರಕರಣ ಧಾರವಾಡದ ಕಲ್ಯಾಣನಗರದಲ್ಲಿ ನಡೆದಿದೆ.
ನಗರದ ಕಲ್ಯಾಣನಗರದ 7ನೇ ಕ್ರಾಸ್​ನ ನಿವಾಸಿ ಶಿವಾನಂದ ಹೊಂಬಳ ಎಂಬುವವರ ಮನೆಯಲ್ಲಿ, ನಿನ್ನೆ ತಡ ರಾತ್ರಿ ದರೋಡೆ ನಡೆದಿದೆ. ನಿನ್ನೆ ರಾತ್ರಿ ಮನೆಗೆ ನುಗ್ಗಿದ ದರೋಡೆಕೊರರು ಮನೆ ಮಾಲೀಕರಾದ ಶಿವಾನಂದ, ಪತ್ನಿ ಹಾಗೂ ಮಗಳನ್ನ ಹಗ್ಗದಿಂದ ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ. 25 ಸಾವಿರ ನಗದು, 25 ಗ್ರಾಂ ಚಿನ್ನ ಕದ್ದು ಪರಾರಿಯಾಗಿದ್ದಾರೆ. ಇನ್ನು ಸ್ಥಳಕ್ಕೆ ವಿದ್ಯಾಗಿರಿ ಪೊಲೀಸ​ರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv