ಭಾರೀ ಮಳೆಗೆ ಮಂಜಿನನಗರಿಯಲ್ಲಿ ಕುಸಿದ ಮನೆ.!

ಕೊಡಗು: ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮಳೆ ಸೃಷ್ಟಿಸಿದ ಅವಾಂತರಗಳು ಒಂದರೆಡಲ್ಲ. ಅಲ್ಲಲ್ಲಿ ಧರೆಗುರುಳಿದ ಮರಗಳು, ಕರೆಂಟ್​ನ ಕಣ್ಣಮುಚ್ಚಾಲೆಯಿಂದ ಕೊಡಗಿನ ಜನರು ಹೈರಾಣಾಗಿದ್ದಾರೆ. ಇದೀಗ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮಡಿಕೇರಿಯಲ್ಲಿ ಮನೆಯೊಂದು ಕುಸಿದಿದೆ.
ರಶ್ಮಿ ಪ್ರವೀಣ್ ಎಂಬವರಿಗೆ ಸೇರಿದ ಹೆಂಚಿನ ಮನೆ ಕುಸಿದಿದ್ದು, ಈ ಮನೆಯಲ್ಲಿ ಸುನಿತಾ,ವಸಂತಿ,ಪ್ರಮೀಳಾ ಎಂಬವರು ಬಾಡಿಗೆಗೆ ಇದ್ದರು ಎನ್ನಲಾಗಿದೆ. ಘಟನೆಯಲ್ಲಿ ಮನೆಯ ಅರ್ಧಭಾಗ ಕುಸಿದಿದ್ದು, ಯಾವುದೇ ಅನಾಹುತವಾಗಿಲ್ಲ. ಸ್ಥಳಕ್ಕೆ ನಗರ ಸಭಾ ಆಯುಕ್ತೆ ಶುಭ ಭೇಟಿ ಪರಿಶೀಲನೆ ನಡೆಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv