ಜೂ.11 ಅವಳಿನಗರ ಹೋಟೆಲ್‌ಗಳು ಬಂದ್

ಧಾರವಾಡ: ಇತ್ತೀಚೆಗೆ ನಗರದಲ್ಲಿ ಹೋಟೆಲ್ ಮಾಲೀಕರು ಸೇರಿದಂತೆ ಸಿಬ್ಬಂದಿ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಅಲ್ಲದೆ, ರಾಜ್ಯಾದ್ಯಂತ ಹಲ್ಲೆ ಘಟನೆಗಳು ಕಾಮನ್ ಅನ್ನೋ ರೀತಿ ಆಗ್ಹೋಗಿದೆ. ಈ ಎಲ್ಲ ಹಲ್ಲೆಗಳನ್ನು ಖಂಡಿಸಿ, ಇದೇ ಜೂನ್ 11 ಸೋಮವಾರ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಎಲ್ಲ ಹೋಟೆಲ್​ಗಳ ಬಂದ್‌ಗೆ ಕರೆ ನೀಡಲಾಗಿದೆ ಎಂದು ಉತ್ತರ ಕರ್ನಾಟಕ ಹೋಟೆಲ್ ಸಂಘದ ಸಂಚಾಲಕ ಸುಧಾಕರ್ ಶೆಟ್ಟಿ ‌ಹೇಳಿದರು.

ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ತಿಂಗಳಿಂದ ಇದುವರೆಗೆ 96 ಹಲ್ಲೆ ಪ್ರಕರಣಗಳು ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ನಡೆದಿವೆ. ಈ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಸೋಮವಾರ ಒಂದು ದಿನ ಅವಳಿ ನಗರದಲ್ಲಿ ಎಲ್ಲಾ ತರಹದ ಹೋಟೆಲ್, ಬಾರ್ & ರೆಸ್ಟೋರೆಂಟ್, ಬೇಕರಿ, ಸ್ವೀಟ್ ಸ್ಟಾಲ್​ಗಳು ಸೇರಿದಂತೆ ಆಹಾರ ಉಧ್ಯಮವನ್ನು ಸಂಪೂರ್ಣ ಬಂದ್ ಮಾಡಲಾಗುವುದು. ಹುಬ್ಬಳ್ಳಿ ಹೋಟೆಲ್ ಮಾಲೀಕರ ಸಂಘದ ಕಚೇರಿಯಿಂದ ಪ್ರತಿಭಟನೆ ಆರಂಭಿಸಿ ನಗರದ ದುರ್ಗದಬೈಲ್, ಮೈಸೂರ್​ ಸ್ಟೋರ್, ದಾಜಿವಾನ್ ಪೇಟ್ ಹಾಗೂ ಸಂಗೊಳ್ಳಿ ರಾಯಣ ವೃತದ ಮಾರ್ಗವಾಗಿ ತಹಶೀಲ್ದಾರ್ ಕಚೇರಿ ಹೋಗಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಸುಧಾಕರ್ ಶೆಟ್ಟಿ ತಿಳಿಸಿದ್ರು.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv