ಮಾಲೀಕರ ಮೇಲೆ ದೌರ್ಜನ್ಯ ಖಂಡಿಸಿ ಹುಬ್ಬಳ್ಳಿಯಲ್ಲಿ ಹೋಟೆಲ್​​ಗಳ​ ಬಂದ್​

ಹುಬ್ಬಳ್ಳಿ: ಕೆಲವು ದಿನಗಳ ಹಿಂದೆ ನಗರದ ಹಳೇ ಬಸ್​ ನಿಲ್ದಾಣ ಬಳಿಯ ಹೋಟೆಲ್​ ಮಾಲೀಕ ಮತ್ತು ಸಿಬ್ಬಂದಿಗಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ, ಇಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹೋಟೆಲ್​ಗಳ ಬಂದ್​​ಗೆ ಕರೆ ನೀಡಿದೆ.

ಚೆನ್ನಮ್ಮ ವೃತ್ತ, ಕೋರ್ಟ್​ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಸೇರಿದಂತೆ ನಗರದಲ್ಲಿನ ಹೋಟೆಲ್​ಗಳನ್ನು ಬಂದ್​ ಮಾಡಲಾಗಿದೆ. ಬೆಳಗ್ಗೆ 10 ಗಂಟೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಉತ್ತರ ಕರ್ನಾಟಕ ಹೋಟೆಲ್​ ಸಂಘ ಹಾಗೂ ಹುಬ್ಬಳ್ಳಿ ಹೊಟೇಲ್​ ಸಂಘದಿಂದ ಪ್ರತಿಭಟನೆ ನಡೆಸಲಾಗುತ್ತಿದೆ.
ಪ್ರತಿಭಟನಾ ಮೆರವಣಿಗೆ ನಡೆಸಿ ಹುಬ್ಬಳ್ಳಿಯ ತಹಶೀಲ್ದಾರ್​ ಮೂಲಕ ಮುಖ್ಯಮಂತ್ರಿಗಳಿಗೆ ಹೋಟೆಲ್​ ಮಾಲೀಕರು ಮನವಿ ಸಲ್ಲಿಸಲಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv