ಹೋಟೆಲ್​​ ಬಂದ್​ ಕರೆಗೆ ವಾಣಿಜ್ಯ ನಗರಿಯಲ್ಲಿ ಉತ್ತಮ ಸ್ಪಂದನೆ

ಹುಬ್ಬಳ್ಳಿ: ಹೋಟೆಲ್​ ಮಾಲೀಕ ಮತ್ತು ಕೆಲಸಗಾರರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಇಂದು ಉತ್ತರ ಕರ್ನಾಟಕ ಹೋಟೆಲ್​ ಸಂಘದಿಂದ ನಡೆಸಿದ ಹುಬ್ಬಳ್ಳಿ ಹೋಟೆಲ್​ ಬಂದ್​​ ಕರೆಗೆ ಉತ್ತಮ ಸ್ಪಂದನೆ ಸಿಕ್ಕಿದೆ.

ಹುಬ್ಬಳ್ಳಿಯ ಹಳೇ ಬಸ್​ ನಿಲ್ದಾಣ ಬಳಿ ಇರುವ ಹೋಟೆಲ್​ ಮತ್ತು ಸಿಬ್ಬಂದಿಗಳ ಮೇಳೆ ನಡೆದ ದೌರ್ಜನ್ಯವನ್ನು ಖಂಡಿಸಿ ಇಂದು ಹುಬ್ಬಳ್ಳಿಯ ಹೋಟೆಲ್​ ಮಾಲೀಕರು ಬಂದ್​ಗೆ ಕರೆ ನೀಡಿದ್ದರು. ಪ್ರತಿಭಟನೆಯಲ್ಲಿ ಹೋಟೆಲ್​ ಮಾಲೀಕರ ಜೊತೆಗೆ ಬಾರ್​​ ಆ್ಯಂಡ್​ ರೆಸ್ಟೋರೆಂಟ್​ ಬಂದ್​ ಮಾಡಿ ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನೆಯೂ ಮರಾಠ ಗಲ್ಲಿಯ ಹುಬ್ಬಳ್ಳಿ ಹೋಟೆಲ್​​ ಸಂಘದ ಕಚೇರಿಯಿಂ ಆರಂಭಗೊಂಡಿತು. 2 ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿ ಹೋಟೆಲ್​ ಮಾಲೀಕರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv