ಬಿಸಿ ನೀರು ಕುಡಿದರೆ ತೂಕ ಕಡಿಮೆಯಾಗುತ್ತಾ..?

ನೀರು ಪ್ರತಿಯೊಂದು ಜೀವಕೂಲಕ್ಕೂ ಅತ್ಯಗತ್ಯ . ನಮ್ಮ  ದೇಹ 70% ನಷ್ಟು ನೀರಿನಿಂದ ತಯಾರಿಸಲ್ಪಟ್ಟಿದೆ.  ನೀರಿಲ್ಲದೇ ಜೀವನವನ್ನ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.  ನಮ್ಮ ದೇಹ ಡಿಹೈಡ್ರೇಟೆಡ್  ಆಗದಂತೆ ಇರಿಸಿಕೊಳ್ಳಲು ಪ್ರತಿದಿನ 7-8 ಗ್ಲಾಸ್ ನೀರಿನ ಕುಡಿಯಲೇಬೇಕು. ಹೆಚ್ಚು ನೀರು ಸೇವಿಸಿದ್ರೆ ನಮ್ಮ ದೇಹದಲ್ಲಿರುವ ಟಾಕ್ಸಿನ್ಸ್​ಗಳು ಮೂತ್ರ ಅಥವಾ ಬೆವರಿನ ಮೂಲಕ ಹೊರಹೋಗುತ್ತದೆ. ಜೊತೆಗೆ ಜೀರ್ಣಕ್ರಿಯೆಯನ್ನ ಕೂಡಾ ಉತ್ತಮವಾಗಿರುತ್ತದೆ.  ಇನ್ನು ಡಯೆಟ್​ ವಿಷಯಕ್ಕೆ ಬಂದ್ರೆ  ಬಿಸಿ ನೀರಿನ ಸೇವನೆ  ತೂಕ  ಕಡಿಮೆ ಮಾಡಲು  ಸಹಾಯ ಮಾಡುತ್ತದೆ.

ಬಿಸಿ ನೀರನ್ನ (ಲ್ಯೂಕ್ ವಾರ್ಮ್ ವಾಟರ್) ಹೆಚ್ಚಾಗಿ ಕುಡಿಯುವುದರಿಂದ ಬೇಗನೆ ತೂಕ ಕಳೆದುಕೊಳ್ಳಬಹುದು ಎಂದು  ಕೇಳಿರುತ್ತೇವೆ. ಯಾಕಂದ್ರೆ  ಬಿಸಿ ನೀರು ಕುಡಿಯುವುದರಿಂದ ಕೊಬ್ಬಿನ ಸ್ನಾಯುಗಳು  ಕಡಿಮೆಯಾಗುತ್ತದೆ. ಹಾಗೂ  ಜೀರ್ಣಕ್ರಿಯೆಯನ್ನ ಹೆಚ್ಚಿಸಲು ಬಿಸಿನೀರು ಸಹಾಯ ಮಾಡುತ್ತದೆ. ನೈಸರ್ಗಿಕವಾಗಿ ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ಸಹಾಯ  ಮಾಡಿ, ದೇಹದಿಂದ ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕಿ, ದೇಹವನ್ನ ಶುದ್ಧಿ ಮಾಡುವುದರ ಜೊತೆಗೆ ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ.  ಅಷ್ಟೇ ಅಲ್ಲ ರಕ್ತ ಪರಿಚಲನೆಯನ್ನ ಹೆಚ್ಚಿಸುತ್ತದೆ.

ಕೇವಲ ಬಿಸಿ ನೀರು ಸೇವಿಸುವುದಕ್ಕಿಂತ ಇದರ ಜೊತೆಯಲ್ಲಿ ಆರೋಗ್ಯಕರ ಆಹಾರ ಸೇವನೆ, ವ್ಯಾಯಾಮಗಳಲ್ಲಿ ಹೆಚ್ಚು ಸಕ್ರೀಯವಾಗಿರುವುದು, ಆರೋಗ್ಯಕರ ‘ಜೀವನ ಶೈಲಿ, ಜಂಕ್​ ಫುಡ್​ ಸೇವನೆ ನಿಲ್ಲಿಸಿ ಹಣ್ಣುಗಳು, ಹಸಿರು ತರಕಾರಿಗಳು, ಡ್ರೈ ಫ್ರೂಟ್ಸ್​ನಂತಹ ಆಹಾರಗಳನ್ನ ಸೇವಿಸುವುದು ಒಳಿತು. ಯಾಕಂದ್ರೆ ಇವುಗಳಲ್ಲಿ ಪೌಷ್ಟಿಕಾಂಶ ಹೇರಳವಾಗಿದ್ದು, ಸುಲಭವಾಗಿ ಜೀರ್ಣವಾಗುತ್ತದೆ. ಇನ್ನು ವ್ಯಾಯಾಮಗಳ ವಿಷಯಕ್ಕೆ ಬಂದ್ರೆ, ಪೈಲೇಟ್ಸ್, ಏರೋಬಿಕ್ಸ್​ ಹೆಚ್ಚು ಕ್ಯಾಲೋರೀಸ್​ ಬರ್ನ್​ ಮಾಡಲು ಸಹಾಯ ಮಾಡುತ್ತದೆ.

ಇನ್ನು ನಿಮಗೆ ಹಸಿವಾಗುತ್ತಿದೆ ಎಂದು ಅನ್ನಿಸಿದ್ರೆ, ಮೊದಲು ಕನ್ಫರ್ಮ್​ ಮಾಡಿಕೊಳ್ಳಿ. ಯಾಕಂದ್ರೆ ಬಾಯಾರಿಕೆಯಿಂದ ಕೂಡಾ ಕೆಲವೊಮ್ಮೆ ನಿಮಗೆ ಹಸಿವಾದಂತೆ ಭಾಸವಾಗಬಹುದು. ಯಾಕಂದ್ರೆ ಹಸಿವು ಮತ್ತು ಬಾಯಾರಿಕೆ ಚಿಹ್ನೆಗಳು ಮೆದುಳಿನ ಒಂದೇ ಭಾಗದಿಂದ ಬಿಡುಗಡೆಯಾಗುವುದರಿಂದ ಈ ರೀತಿ ಆಗುವ ಸಾಧ್ಯತೆಗಳಿರುತ್ತದೆ. ಒಂದು ವೇಳೆ ನೀರು ಸೇವನೆಯಿಂದ ನಿಮ್ಮ ಹಸಿವು ಕಡಿಮೆಯಾದ್ರೆ,  ನಿಮ್ಮ ದೇಹಕ್ಕೆ ಹೆಚ್ಚು ಕ್ಯಾಲೋರೀಸ್​ ಕೊಡುವುದನ್ನ ತಪ್ಪಿಸುತ್ತದೆ. ಒಂದು ವೇಳೆ ನಿಮಗೆ ತುಂಬಾ ಹಸಿವಾಗಿದೆ ಅಂತಾ ಅನ್ನಿಸುತ್ತಿದ್ರೆ 1-2 ಗ್ಲಾಸ್​ ನೀರು ಸೇವಿಸಿ. ಮತ್ತು ಸ್ವಲ್ಪ ಸಮಯ ಕಾಯಿರಿ, ಆಗಲೂ ಹಸಿವು ಹಾಗೆ ಇದ್ದರೆ ಕಡಿಮೆ ಕ್ಯಾಲೋರೀಸ್​ ಇರುವ ಆಹಾರ ಸೇವಿಸಿ


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv